ಬಂಧಿತ ಆರೋಪಿ ಶ್ರೀಕಾಂತ ಪೂಜಾರಿ ಜಾಮೀನು: ನಾಳೆಗೆ ಅರ್ಜಿ ಸಲ್ಲಿಸಲಿರುವ ವಕೀಲ ಸಂಜೀವ ಬಡಸ್ಕರ…!
1 min readಹುಬ್ಬಳ್ಳಿ: ಶಹರ ಠಾಣೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿರುವ ಶ್ರೀಕಾಂತ ಪೂಜಾರಿಯ ಜಾಮೀನು ಅರ್ಜಿಯನ್ನ ನ್ಯಾಯವಾದಿ ಸಂಜೀವ ಬಡಸ್ಕರ ಸಲ್ಲಿಸಲಿದ್ದಾರೆ.
ಇಂದು ಪ್ರಕರಣಕ್ಕೆ ಸಂಬಂಧಿಸಿದ ಬಹುತೇಕ ದಾಖಲೆಗಳನ್ನ ವಕೀಲರು ಸಂಗ್ರಹಿಸಿದ್ದು, ಜಾಮೀನು ಅರ್ಜಿ ಸಲ್ಲಿಕೆಯಾದ ಮೇಲೆ ಹಲವು ದಿನಗಳು ನ್ಯಾಯಾಲಯದ ಪ್ರಕ್ರಿಯೆ ನಡೆಯಲಿದೆ.
1992ರಲ್ಲಿನ ಪ್ರಕರಣದಲ್ಲಿ ಶ್ರೀಕಾಂತ ಪೂಜಾರಿಗೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ವಿಷಯವೀಗ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದು, ನಾಳೆ ಇದೇ ಕಾರಣಕ್ಕೆ ಬಿಜೆಪಿ ಹೋರಾಟ ಹಮ್ಮಿಕೊಂಡಿದೆ.