ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ದಾಳಿ- ಗೋವಾ “ಮಾಲು” ಪತ್ತೆ…!
1 min readಹುಬ್ಬಳ್ಳಿ: ಗೋವಾ ರಾಜ್ಯದಲ್ಲಿ ಮಾರಾಟ ಮಾಡಬೇಕಿದ್ದ ಮದ್ಯವನ್ನ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಆಟೋ ಸಮೇತ ಇಬ್ಬರು ಸಿಕ್ಕಿಬಿದ್ದಿದ್ದು, ಮದ್ಯವನ್ನ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನ ಪ್ರಕಾಶ ಹಾಗೂ ಕ್ಲೆಮೆಂಟ್ ನೆರೆಲ್ಲಾ ಎಂದು ಗುರುತಿಸಲಾಗಿದ್ದು, ಆರೋಪಿಗಳ ಬಳಿಯಿದ್ದ ವಿವಿಧ ನಮೂನೆಯ 13.5 ಲೀಟರ ಗೋವಾ ಮದ್ಯ ಹಾಗೂ 48 ಬಿಯರ್ ಟಿನಗಳನ್ನ ವಶಕ್ಕೆ ಪಡೆಯಲಾಗಿದೆ. ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಆಟೋವನ್ನ ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ 35854 ರೂಪಾಯಿ ಎಂದು ಅಂದಾಜಿಸಲಾಗಿದೆ.
ಅಬಕಾರಿ ನಿರೀಕ್ಷಕ ಸಂಜೀವರೆಡ್ಡಿ ಬಳುಲದ ನೀಡಿದ ದೂರಿನ ಮೇರೆಗೆ ಪ್ರಕರಣವನ್ನ ಅಬಕಾರಿ ಉಪ ನಿರೀಕ್ಷಕ ಬಾಬಾಸಾಬ ಲಡಗಿ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನ ಕೈಗೊಂಡಿದ್ದಾರೆ.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಕೆ.ಕುಮಾರ, ಡೆಪ್ಯೂಟಿ ಕಮೀಶನರ್ ಆಫ್ ಎಕ್ಸೈಸ್ ಕೆ ಅರುಣಕುಮಾರ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಸಂಜೀವರೆಡ್ಡಿ ಬಳುಲದ ನೇತೃತ್ವದಲ್ಲಿ ಅಬಕಾರಿ ಪೇದೆಗಳಾದ ಜಾನ್ ವರ್ಗೀಸ್, ಪ್ರಕಾಶ ಮುಳಗುಂದ, ಬಿ.ಬಿ.ರಾಜಣ್ಣವರ, ಎ.ಎನ್. ಶಿರಹಟ್ಟಿ, ವಾಹನ ಚಾಲಕ ಶೇಖರ ಗುಡ್ಡಪ್ಪ ಜ್ಯೋತಿ ದಾಳಿಯಲ್ಲಿ ಪಾಲ್ಗೊಂಡಿದ್ದರು.