ಅಕ್ರಮ ಸಾರಾಯಿ-ಕುರಡಿಕೇರಿ ಇಂದುಬಾಯಿ ಅಂದರ್
1 min readಹುಬ್ಬಳ್ಳಿ: ಗ್ರಾಮ ಪಂಚಾಯತಿಯ ಚುನಾವಣೆಯ ಸಮಯದಲ್ಲಿ ಅಕ್ರಮವಾಗಿ ಸರಾಯಿಯನ್ನು ಮಾರಾಟ ಮಾಡುತ್ತಿದ್ದ ಮಹಿಳೆಯನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ, ಮಾಲು ಸಮೇತ ಮಹಿಳೆಯೊಬ್ಬಳು ಸಿಕ್ಕಿರುವ ಘಟನೆ ಕುರಡಿಕೇರಿ ಗ್ರಾಮದ ಬಳಿ ನಡೆದಿದೆ. ಬಂಧಿತಳನ್ನ ಕುರಡಿಕೇರಿ ಗ್ರಾಮದ 42 ವರ್ಷದ ಇಂದುಬಾಯಿ ಜಾಧವ ಎಂದು ಗುರುತಿಸಲಾಗಿದೆ.
ಬಂಧಿತ ಮಹಿಳೆಯಿಂದ 17 ಒರಿಜಿನಲ್ ಚಾಯ್ಸ್, 18 ಹೈವಾರ್ಡ್ಸ್ ವಿಸ್ಕೀ, 20 ಫೈವ್ ಸ್ಟಾರ್ ವಿಸ್ಕೀ ಟೆಟ್ರಾಪ್ಯಾಕ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಶಹರದಿಂದ ತಂದು ಅನಧಿಕೃತವಾಗಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರೆಂದು ಗೊತ್ತಾಗಿದೆ.
ಗ್ರಾಮೀಣ ಠಾಣೆ ಪೊಲೀಸರು ಅಬಕಾರಿ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ರಮೇಶ ಗೋಕಾಕ ಮಾರ್ಗದರ್ಶನದಲ್ಲಿ ಪಿಎಸ್ಐ ಚಾಮುಂಡೇಶ್ವರಿ ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆರೋಪಿಯನ್ನ ಬಂಧನ ಮಾಡಿದ್ದಾರೆ.