Posts Slider

Karnataka Voice

Latest Kannada News

“ಭಾರತ ಜ್ಞಾನ ವಿಜ್ಞಾನ-ಅಪ್ನಾದೇಶ” ಈರಣ್ಣ ಜಡಿ ಸತ್ಕಾರ

Spread the love

ಧಾರವಾಡ: ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿಯವರನ್ನ ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಅಪ್ನಾದೇಶ ಬಳಗದಿಂದ ಸತ್ಕರಿಸಲಾಯಿತು.

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ  ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ,  ಕೋಶಾಧ್ಯಕ್ಷ  ಎಸ್.ಎಫ್. ಪಾಟೀಲ, ಭಾರತ ಜ್ಞಾನ ವಿಜ್ಞಾನ ರಾಜ್ಯ ಸಮಿತಿಯ ಸದಸ್ಯ ಎಲ್ ಐ ಲಕ್ಕಮ್ಮನವರ, ಹೆಬ್ಬಳ್ಳಿಯ ಶಿವರಾಜ, ಧಾರವಾಡದ ಚಂದ್ರು ಮೋರೆ, ಸುರೇಶ ಬನ್ನಿಗಿಡದ, ಶರಣಪ್ಪ ಸಾಲಿ ಮುಂತಾದವರು ಹಾಜರಿದ್ದರು.

ಬಾಲ ವಿಕಾಸ ಅಕಾಡೆಮಿ ವತಿಯಿಂದ ಮಕ್ಕಳ ಹಬ್ಬಗಳನ್ನು, ವಿಜ್ಞಾನದ ಹಬ್ಬಗಳನ್ನು, ಪವಾಡ ಬಯಲು, ಹಳ್ಳಿಗಾಡಿನ ಆಟಗಳು ಜನಪದ ಕ್ರೀಡೆಗಳು ಜೊತೆಗೆ ಈಗ ಮಕ್ಕಳು ಪಬ್ಜಿಯಂತಹ ಆಟಗಳ ದಾಸರಾಗಿ ಮಕ್ಕಳು ಶೈಕ್ಷಣಿಕವಾಗಿ ಬೆಳೆಯುತ್ತಿಲ್ಲ. ಆದ್ದರಿಂದ, ಅಂತಹ ಆಟಗಳಿಂದ ನಮ್ಮ ಮಕ್ಕಳನ್ನು ಮುಕ್ತ ಮಾಡಿ  ಮಕ್ಕಳ ಪ್ರಗತಿಗಾಗಿ ಸಂಸ್ಥಾಪಕ ಅಧ್ಯಕ್ಷ  ಶಂಕರ ಹಲಗತ್ತಿ, ನಂತರ ಬಂದ ಮಹೇಶ ಟೆಂಗಿನಕಾಯಿ ಜೊತೆಗೆ ಬಾಲ ವಿಕಾಸ ಅಕ್ಯಾಡೆಮಿಯಲ್ಲಿ ಸತತ ಪ್ರಯತ್ನ ಮಾಡಿದ ಎಲ್ಲಾ ಸದಸ್ಯರುಗಳನ್ನು ಕರೆದು ಸಭೆ ಮಾಡಿ ಸಲಹೆ ಸೂಚನೆಗಳನ್ನು ಮಾರ್ಗದರ್ಶನ ಪಡೆಯುವೆ ಎಂದು  ಈರಣ್ಣ ಜಡಿ ತಿಳಿಸಿದರು.


Spread the love

Leave a Reply

Your email address will not be published. Required fields are marked *