ಹುಬ್ಬಳ್ಳಿ ಎಪಿಎಂಸಿ, ರಾಮನಗರದಲ್ಲಿ ಪೊಲೀಸರ ಕಾರ್ಯಾಚರಣೆ- ಮೂವರು “ಗಾಂಜಿಗರ” ಬಂಧನ
1 min readಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರು ಗಾಂಜಾ ಮಾರಾಟ ಮಾಡುತ್ತಿದ್ದವರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ರಾಮನಗರದ ಸೆಂಟ್ ಮೈಕಲ್ಸ್ ಶಾಲೆಯ ಹತ್ತಿರವಿರುವ ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಹೊರಟಿದ್ದ ಇಬ್ಬರನ್ನ ಬಂಧನ ಮಾಡಲಾಗಿದೆ.
ಬಂಧಿತರನ್ನ ಕೇಶ್ವಾಪುರದ ಸಿದ್ಧಾರ್ಥ ಕಾಲನಿಯ ಹರೀಶ ಚಂದ್ರಶೇಖರ ಮಾಳಿ ಹಾಗೂ ಗೋಪನಕೊಪ್ಪದ ನಿಖಿಲ ಕೃಷ್ಣಾ ಪತಿಗೊಂಡ ಎಂಬುವವರನ್ನ ಬಂಧನ ಮಾಡಲಾಗಿದೆ. ಬಂಧಿತರಿಂದ 5500 ಮೌಲ್ಯದ 544 ಗ್ರಾಂ ಗಾಂಜಾ ಹಾಗೂ ಎರಡು ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಕಮೀಷನರ್ ಲಾಬುರಾಮ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಎಂ.ಎಸ್.ಹೂಗಾರ ನೇತೃತ್ವದಲ್ಲಿ ಪಿಎಸ್ಐಐ ಎಸ್.ಜಿ.ಕಾನಟ್ಟಿ ಸಿಬ್ಬಂದಿಗಳಾದ ಎಸ್.ಎಂ.ಕುರಹಟ್ಟಿ, ಸಿ.ಎಂ.ಕಂಬಾಳಿಮಠ, ಎಂ.ಎಚ್.ಹಾಲಾವರ, ಎ.ಎಂ.ತಹಶೀಲ್ದಾರ, ಪಿ.ಕೆ.ಬಿಕ್ಕನಗೌಡರ, ಗಿರೀಶ ಬಡಿಗೇರ, ರವಿ ಕೋಳಿ, ಫಕ್ಕೀರೇಶ ಸುಣಗಾರ, ಜಯಶ್ರೀ ಚಿಲ್ಲೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಹುಬ್ಬಳ್ಳಿ ಎಪಿಎಂಸಿ ಗೇಟ್ ಹತ್ತಿರ ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುವ ಯತ್ನದಲ್ಲಿ ಓರ್ವನನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನ ಧಾರವಾಡ ರಾಜೀವಗಾಂಧಿನಗರದ ಸೈಯ್ಯದ ಬಾಬುಸಾಬ ಅತ್ತಾರ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 2050 ರೂ ಮೌಲ್ಯದ 280 ಗ್ರಾಂ ಗಾಂಜಾ, ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಕಮೀಷನರ್ ಲಾಬುರಾಮ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ಎಂ.ಎಸ್.ಹೂಗಾರ ನೇತೃತ್ವದಲ್ಲಿ ಪಿಎಸ್ಐ ಎಸ್.ಜಿ.ಕಾನಟ್ಟಿ ಸಿಬ್ಬಂದಿಗಳಾದ ಎಸ್.ಎಂ.ಕುರಹಟ್ಟಿ, ಸಿ.ಎಂ.ಕಂಬಾಳಿಮಠ, ಎಂ.ಎಚ್.ಹಾಲಾವರ, ಎ.ಎಂ.ತಹಶೀಲ್ದಾರ, ಪಿ.ಕೆ.ಬಿಕ್ಕನಗೌಡರ, ಗಿರೀಶ ಬಡಿಗೇರ, ರವಿ ಕೋಳಿ, ಫಕ್ಕೀರೇಶ ಸುಣಗಾರ, ಜಯಶ್ರೀ ಚಿಲ್ಲೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.