ನವನಗರ ಎಪಿಎಂಸಿ “ಪಿಐ ಬಾ…ಳಪ್ಪ”ನವರು ಮಾಡಿದ ಪ್ರಮಾದಕ್ಕೆ ಇನ್ನೂ ಸಿಗುತ್ತಿಲ್ಲಾ ಕೊಲೆಗೆಡುಕರು….!!!
1 min readಹುಬ್ಬಳ್ಳಿ: ನವನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರನಗರದಲ್ಲಿ ಕಾಣೆಯಾಗಿದ್ದ ಮಹಿಳೆಯೊಬ್ಬಳ ದೂರನ್ನ ಪಡೆದುಕೊಂಡಿದ್ದರೇ, ಮತ್ತೊಂದು ಮಹಿಳೆಯ ಕೊಲೆ ಆಗುತ್ತಿರಲಿಲ್ಲ. ಮತ್ತೂ ಕೊಲೆಗೆಡುಕರು ಸಿಕ್ಕಿ ಬೀಳುತ್ತಿದ್ದರೆಂಬ ಮಾತುಗಳು ಇಲಾಖೆಯಲ್ಲಿ ಕೇಳಿ ಬರುತ್ತಿವೆ.
ಈಶ್ವರನಗರದ ಇಂದ್ರಾಬಾಯಿ ಪವಾರ ಎಂಬ ಮಹಿಳೆ ಕಾಣೆಯಾಗಿ ಹಲವು ದಿನಗಳು ಕಳೆದ ನಂತರವೂ ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರು ದೂರನ್ನ ಪಡೆದುಕೊಂಡಿರಲಿಲ್ಲ. ಹಾಗಾಗಿಯೇ, ಕಲಘಟಗಿಯ ಕಾಡನಕೊಪ್ಪದ ಬಳಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವ ಯಾರದ್ದೆಂದು ತಿಳಿಯದ್ದಾಗಿತ್ತು.
ಅರೆಬೆಂದ ಶವ ಯಾರದ್ದೆಂದು ಕಲಘಟಗಿ ಠಾಣೆಯ ದಕ್ಷ ಅಧಿಕಾರಿ ಶ್ರೀಶೈಲ ಕೌಜಲಗಿ ಹುಡುಕಾಡುತ್ತ ನಡೆದಾಗ, ಮತ್ತೊಂದು ಶವ ಅವರದ್ದೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕಿತ್ತು. ಸೋಜಿಗವೆಂದರೇ, ಆ ಎರಡು ಶವಗಳು ನವನಗರದ ಬಳಿಯ ಈಶ್ವರನಗರದ ನಿವಾಸಿಗಳದ್ದೆ ಎಂಬುದು ಗೊತ್ತಾಯಿತು.
ಎರಡನೇಯ ಕೊಲೆ ಪ್ರಕರಣದಲ್ಲಿ ಕಾಣೆಯಾಗಿದ್ದ ಮಹಾದೇವಿ ನೀಲಮ್ಮನವರ ಬಗ್ಗೆ ಮಾಹಿತಿ ಪಡೆದು, ಪ್ರತಿಯೊಂದು ಕಾನೂನು ಪರಿಧಿಯನ್ನ ನಿಭಾಯಿಸಿದ್ದರೂ ಎಪಿಎಂಸಿ ಠಾಣೆಯ ಹವಾಲ್ದಾರ್ ಬಡಿಗೇರ ಎಂಬುವವರನ್ನ ಅಮಾನತ್ತು ಮಾಡಲಾಯಿತು. ಆದರೆ, ಅದೇ ಠಾಣೆಯಲ್ಲಿ ಹದಿನೈದು, ಇಪ್ಪತ್ತು ದಿನವಾದರೂ ದೂರನ್ನೇ ಪಡೆಯದಿರುವ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರಿಗೆ ಹಿರಿಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯಲಾಗಿದೆ. ಹೀಗಾದ್ರೇ, ಕೆಳಮಟ್ಟದ ಸಿಬ್ಬಂದಿಗಳು ಯಾರನ್ನ ನಂಬಿ ಕರ್ತವ್ಯ ನಿರ್ವಹಿಸಬೇಕು..