“ಅರೇ… ಹೋ… ಸಾಂಬಾ, ಕಿತನೇ ಆದ್ಮಿ ತೇ..!” ‘ಅಡ್ತೀಸ್’ ಸರಕಾರ್…!!!
1 min readಹುಬ್ಬಳ್ಳಿ: ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವನ್ನ ಜರುಗಿಸಲು ಮುಂದಾಗಿದ್ದು, ನವನಗರದ ಎಪಿಎಂಸಿ ಠಾಣೆ ಇನ್ಸಪೆಕ್ಟರ್ ಇಂದು ಹಲವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರೌಡಿ ಷೀಟರ್ ಹಾಗೂ ಎಂಓಬಿಗಳ ಪರೇಡ್ ನಡೆಸಿದ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರು, ಅಹಿತಕರ ಘಟನೆ ನಡೆದರೇ ಸುಮ್ಮನಿರುವುದಿಲ್ಲ. ನಿಮ್ಮನ್ನೇ ಹೊಣೆಗಾರನನ್ನಾಗಿ ಮಾಡುವುದಾಗಿ ಎಚ್ಚರಿಸಿದ್ದಾರೆ.
ನವನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ 38 ಜನ ರೌಡಿಷೀಟರ್, ಎಂಓಬಿಗಳನ್ನ ಠಾಣೆಗೆ ಕರೆಸಿ ಕಟ್ಟೇಚ್ಚರಿಕೆ ನೀಡಲಾಗಿದೆ. ಗಣೇಶ ಹಬ್ಬದ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಎಲ್ಲರ ಮುಂದಾಗಬೇಕೆಂದು ಇನ್ಸಪೆಕ್ಟರ್ ಹೇಳಿದರು.