ನವನಗರದ “ಎಪಿಎಂಸಿ ಠಾಣೆಯಲ್ಲಿ” ಗೌರವಿಸಿ ಬಿಳ್ಕೋಟ್ ಇನ್ಸಪೆಕ್ಟರ್ ಬಾಳಪ್ಪ ಮಂಟೂರ…

ಹುಬ್ಬಳ್ಳಿ: ಕಮೀಷನರೇಟ್ ವ್ಯಾಪ್ತಿಯಲ್ಲಿನ ನವನಗರದ ಎಪಿಎಂಸಿ ಠಾಣೆಯಿಂದ ವರ್ಗಾವಣೆಗೊಂಡ ಸಿಬ್ಬಂದಿಗಳನ್ನ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರು ಆದರದಿಂದ ಗೌರವಿಸಿ ಬೀಳ್ಕೋಟರು.

ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಇತ್ತೀಚೆಗೆ ಪ್ರತಿ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿದ್ದು, ಅದೇ ಸಮಯದಲ್ಲಿ ಎಪಿಎಂಸಿ ಪೊಲೀಸ್ ಠಾಣೆಯ ಹಲವರು ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿದ್ದಾರೆ.
ವರ್ಗಾವಣೆಗೊಂಡ ಸಿಬ್ಬಂದಿಗಳನ್ನ ಠಾಣೆಗೆ ಕರೆಸಿಕೊಂಡು ಪ್ರತಿಯೊಬ್ಬರನ್ನೂ ಆದರದಿಂದ ನಡೆಸಿಕೊಂಡು ಸತ್ಕರಿಸಿರುವ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಅವರು, ಸಿಬ್ಬಂದಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ.