ಎಪಿಎಂಸಿ ಸೃಷ್ಟಿಸಿದ ಗೊಂದಲ: ಖರೀದಿ ಸ್ಥಗಿತ: ಬೆಚ್ಚಿಬಿದ್ದ ರೈತರಿಂದ ಹೋರಾಟ
1 min readಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರು ಎಪಿಎಂಸಿಯ ಕಾರ್ಯದರ್ಶಿ ಮತ್ತು ಟೆಂಡರದಾರರ ಹಗ್ಗ-ಜಗ್ಗಾಟದಿಂದ ವ್ಯಾಪಾರ ಸ್ಥಗಿತಗೊಂಡ ಪರಿಣಾಮ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.
ಹತ್ತಿ ಮತ್ತು ಮೆಕ್ಕೆಜೋಳ ಮಾರಾಟಕ್ಕೆ ಎಪಿಎಂಸಿಗೆ ಬಂದಿದ್ದ ನೂರಾರು ರೈತರು, ಕಾರ್ಯದರ್ಶಿ ಮತ್ತು ಟೆಂಡರದಾರರ ನಡುವಿನ ಭಿನ್ನಾಭಿಪ್ರಾಯದಿಂದ ಬೇಸತ್ತು ಹೋರಾಟಕ್ಕೆ ಇಳಿದರು. ಟೆಂಡರ್ ಆಗದಿದ್ದಕ್ಕೆ ಎಪಿಎಂಸಿ ಕಾರ್ಯದರ್ಶಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಟೆಂಡರ್ ಪ್ರಕ್ರಿಯೆ ಆರಂಭಿಸಿ ಹತ್ತಿ ಮತ್ತು ಮೆಕ್ಕೆಜೋಳ ಖರೀದಿಸುವಂತೆ ರೈತರ ಪಟ್ಟು ಹಿಡಿದಿದ್ದು, ಎಪಿಎಂಸಿ ನಿರ್ಧಾರವನ್ನ ಕಾಯುವಂತಾಗಿದೆ.