ಅಧಿಕೃತವಾಗಿ ಉದ್ಘಾಟನೆಗೊಂಡ ಅಣ್ಣಿಗೇರಿ ತಾಲೂಕು ಪಂಚಾಯತಿ…

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ತಾಲೂಕು ಪಂಚಾಯತಿ ಕಚೇರಿಯನ್ನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಇಂದು ಅಧಿಕೃತವಾಗಿ ಉದ್ಘಾಟನೆ ಮಾಡಿದರು.
ನೂತನವಾಗಿ ತಾಲೂಕು ಪಂಚಾಯತಿ ಕಟ್ಟಡವನ್ನ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಕೆಲವರು ಜಿಲ್ಲಾಡಳಿತವನ್ನೇ ಧಿಕ್ಕರಿಸಿ ಕಚೇರಿಯನ್ನ ಉದ್ಘಾಟನೆ ಮಾಡುವ ಬದಲು, ಕಟ್ಟಡದ ಉದ್ಘಾಟನೆ ಮಾಡಿದ್ದರು. ಅದೇ ಕಾರಣಕ್ಕೆ ತಾಲೂಕಿನ ಅಧಿಕಾರಿಗಳು ಅಂದಿನಿಂದಲೇ ಕಚೇರಿಗೆ ಬೀಗವನ್ನ ಹಾಕಿದ್ದರು. ಶಾಸಕ ಶಂಕರ ಪಾಟೀಲಮುನೇನಕೊಪ್ಪಯವರು ಆಸಕ್ತಿ ವಹಿಸಿ, ಆಡಳಿತ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ ಎಂಬುದನ್ನ ಈ ಮೂಲಕ ತೋರಿಸಿಕೊಟ್ಟಿದ್ದು, ತಾಲೂಕು ಪಂಚಾಯತಿ ಕಚೇರಿಯನ್ನ ಅಧಿಕೃತವಾಗಿ ಉದ್ಘಾಟನೆ ಮೂಲಕ ತೆರವುಗೊಳಿಸಿದ್ದಾರೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಾಲೂಕು ಪಂಚಾಯತಿಯನ್ನ ಉದ್ಘಾಟನೆ ಮಾಡಿದರು. ಶಾಸಕ ಶಂಕರ ಪಾಟೀಲಮುನೇನಕೊಪ್ಪ, ದಾಸೋಹಮಠದ ಶ್ರೀಗಳಾದ ಶ್ರೋ.ಬ್ರ.ಶ್ರೀ ಶಿವಕುಮಾರ ಸ್ವಾಮಿಗಳು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಈರಣ್ಣ ಜಡಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಮುಖಂಡರಾದ ಶಿವಯೋಗಿ ಸುರಕೋಡ, ಮಹೇಶಗೌಡ್ರು ದೇಸಾಯಿ, ಬಸವರಾಜ ಯಳವತ್ತಿ, ಜಿ.ಪಂ.CEO ಬಿ.ಸುಶೀಲಾ, ತಹಶೀಲ್ದಾರರಾದ ಕೊಟ್ರೇಶ ಗಾಳಿ, ಕಾರ್ಯ ನಿರ್ವಾಹಕ ಅಧಿಕಾರಿಗಳು, ಪಟ್ಟಣದ ಗುರು-ಹಿರಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.