ಅಣ್ಣಿಗೇರಿಯಲ್ಲಿ ಉರ್ದು ಶಾಲೆಗೆ ಬಣ್ಣ ಹಚ್ಚಿದ ವಿನೋದ ಅಸೂಟಿ…

ಅಣ್ಣಿಗೇರಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹದ್ಧೂರ ಶಾಸ್ತ್ರಿಯವರ ಜಯಂತಿ ಅಂಗವಾಗಿ ಧಾರವಾಡ ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಸರಕಾರಿ ಶಾಲೆಗೆ ಬಣ್ಣ ಹಚ್ಚುವ ಮೂಲಕ ಆಚರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿನೋದ ಅಸೂಟಿಯವರು, ಸ್ವತಂತ್ರ ಪೂರ್ವದಲ್ಲಿ ನಮ್ಮ ಹಿರಿಯರು ಯಾವುದೇ ಜಾತಿ ಯಾವುದೇ ಧರ್ಮ ಎನ್ನದೆ ನಮ್ಮ ಹಿರಿಯರ ಬಲಿದಾನದಿಂದ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು ಆದರೆ ಸ್ವಾತಂತ್ರ್ಯ ಸಿಕ್ಕ ನಂತರ ಬಿಜೆಪಿ ಯವರು ನಾವು ಹಿಂದೂಗಳು ಹಿಂದುತ್ವ ಎಂದು ಕೋಮುವಾದ ಬಿತ್ತಿದರು. ಆದರೆ, ಭಾರತ ದೇಶ ವೈವಿಧ್ಯತೆಯ ರಾಷ್ಟ್ರ ಎಂದು ಕಾಂಗ್ರೆಸ್ ಪಕ್ಷವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದರು.
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಪ್ರಯುಕ್ತ ಅಣ್ಣಿಗೇರಿ ನಗರದಲ್ಲಿ ಸರ್ಕಾರಿ ಪ್ರಾಥಮಿಕ ಹಿರಿಯ ಉರ್ದು ಶಾಲೆಯಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ವಿನೋದ್ ಅಸೂಟಿ ನೇತೃತ್ವದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಗೆ ನವೀಕರಣ ಮಾಡಲು ಚಾಲನೆ ನೀಡಲಾಯಿತು. ಈ ಉತ್ತಮ ಸಂದೇಶ ನಾವೆಲ್ಲರೂ ಒಂದೇ ಮತ್ತು ಜಾತಿ ಜಾತಿ ಧರ್ಮ ಧರ್ಮ ಎನ್ನುವ ಕೆಲವು ಮುಖಂಡರು ಮತ್ತು ಯುವಕರಿಗೆ ಸಂದೇಶ ವಾಗಬೇಕು ನಾವೆಲ್ಲರೂ ಒಂದೇ ಹೆಮ್ಮೆಯಿಂದ ಹೇಳುತ್ತೇವೆ ನಾವು ಭಾರತೀಯರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಂಜುನಾಥ ಮಾಯಣ್ಣನವರ, ಶಂಕ್ರಣ್ಣ ಕುರಿ, ಶಿವಣ್ಣ ಬಾಳೋಜಿ, ದಾವಲಸಾಬ ಕಲಂದರ, ಬಸವರಾಜ ಕುಬಸದ, ಡಿ.ಎಲ್.ಅಡಕಾವು, ಮಾರುತಿ ಕಾಳೆ, ಪ್ರಕಾಶ ಅಂಗಡಿ, ಮುತ್ತು ದ್ಯಾವನೂರ, ಸುಂಕದ ಸೇರಿದಂತೆ ಹಲವರು ಉಪಸ್ಥಿತರಿದ್ದರು.