ಅಣ್ಣಿಗೇರಿ ತಾಲೂಕು ಪಂಚಾಯತಿಗೆ ಬೀಗ: ಕೋನರೆಡ್ಡಿ ವಿರುದ್ಧ ಮುನೇನಕೊಪ್ಪ ಟೀಕೆ
ಧಾರವಾಡ: ಇನ್ನೂ ಉದ್ಘಾಟನೆಯಾಗದ ತಾಲೂಕು ಪಂಚಾಯತಿ ಕಚೇರಿಯನ್ನ ಉದ್ಘಾಟನೆ ಮಾಡಿ ಶಿಷ್ಟಚಾರ ಉಲ್ಲಂಘನೆಯಾಗಿರುವ ಪರಿಣಾಮ ಅಧಿಕಾರಿಗಳು ನವಲಗುಂದ ಕ್ಷೇತ್ರದ ಅಣ್ಣಿಗೇರಿ ತಾಲೂಕು ಪಂಚಾಯತಿ ಕಚೇರಿಗೆ ಬೀಗ ಹಾಕಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಡೀ ಪ್ರಕರಣದ ಬಗ್ಗೆ ವೀಡಿಯೋದಲ್ಲಿ ನೋಡಿ ತಿಳಿಯಿರಿ..
ಅಣ್ಣಿಗೇರಿ ತಾಲೂಕು ರಚನೆಯಾದ ಮೇಲೆ ಆಯ್ಕೆಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷರು ತಮ್ಮ ಕೊಠಡಿಗಳನ್ನ ಪೂಜೆ ಮಾಡಿಕೊಂಡು ಅಧಿಕಾರ ಸ್ವೀಕರಿಸುವ ಬದಲು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಉಪಸ್ಥಿತಿಯಲ್ಲಿ ಉದ್ಘಾಟನೆಯೇ ಆಗದ ತಾಲೂಕು ಪಂಚಾಯತಿ ಕಾರ್ಯಾಲಯವನ್ನೇ ಉದ್ಘಾಟನೆ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಓರ್ವ ಶಾಸಕ ಮಂತ್ರಿಯಾದ್ರೇ, ಅವರು ತಮ್ಮ ಕೊಠಡಿಯನ್ನ ಪೂಜೆ ಮಾಡಿಕೊಳ್ಳುತ್ತಾರೋ ಅಥವಾ ವಿಧಾನಸೌಧವನ್ನೇ ಉದ್ಘಾಟನೆ ಮಾಡುತ್ತಾರೋ ಎಂದು ಕೇಳುವಂತಾಗಿದೆ.
ಅಧಿಕಾರಿಗಳು ಮಾಡಿದ ಯಡವಟ್ಟನ್ನ ಸರಿ ಮಾಡಿಕೊಳ್ಳಲು ಅಧಿಕಾರಿಗಳು ತಾವೇ ಖುದ್ದಾಗಿ ತಾಲೂಕು ಪಂಚಾಯತಿ ಕಚೇರಿಗೆ ಬೀಗ ಹಾಕಿದ್ದು, ನೂತನವಾಗಿ ಆಯ್ಕೆಯಾದವರ ಸ್ಥಿತಿ ಕಚೇರಿಗೆ ಹೋಗದ ಹಾಗಾಗಿದೆ.
ನೂತನ ಕಾರ್ಯಾಲಯಗಳು ಉದ್ಘಾಟನೆಯಾಗಬೇಕಾದರೇ ಅದಕ್ಕೊಂದು ಶಿಷ್ಟಾಚಾರವಿರತ್ತೆ. ಅದನ್ನ ಮೀರಿ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ನಡೆದುಕೊಂಡಿದ್ದಾರೆ ಎಂದು ಹಾಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದ್ದಾರೆ.