ಅಣ್ಣಿಗೇರಿಯಲ್ಲಿ ಘಟನೆ ನಡೆದದ್ದೇನು.. ನಿಷೇಧಾಜ್ಞೆಯಾಗಿದೆ ಎಂದು ಸುಳ್ಳು ಹಬ್ಬಿಸಿದ್ದು ಯಾರೂ..
1 min readಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕುರಿ ಕಾಳಗ ಎರಡು ಗುಂಪುಗಳಲ್ಲಿ ಗೊಂದಲವನ್ನುಂಟು ಮಾಡಿದ ಘಟನೆ ನಡೆದಿದೆ.
ಹರಣಶಿಕಾರಿ ಜನ ಹಾಗೂ ಕುರಿ ಕಾಳಗ ಏರ್ಪಡಿಸಿದ್ದ ಕೆಲವರು ಗೊಂದಲ ಸೃಷ್ಟಿ ಮಾಡಿ, ಜಗಳವಾಡಿಕೊಂಡಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಲಾಠಿಯನ್ನ ಬೀಸಿ ಜನರನ್ನ ಚದುರಿಸಿದ್ದಾರೆ.
ನಡೆದ ಘಟನೆ ಇಷ್ಟೇ. ಇಲ್ಲಿಯವರೆಗೆ ಯಾರೂ ಬಂದು ದೂರು ನೀಡಿಲ್ಲ. ಸಣ್ಣಪುಟ್ಟ ಗಾಯಗಳಾದವರಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಕೆಲವು ಸುಳ್ಳು ಸುದ್ದಿಯನ್ನ ಹಬ್ಬಿಸಿ ಲಾಠಿ ಚಾರ್ಜ್ ಆಗಿದೆಯಂದೂ, ಅಣ್ಣಿಗೇರಿಯಲ್ಲೂ ನಿಷೇಧಾಜ್ಞೆಯಾಗಿದೆಯಂದು ಬಿಂಬಿಸೋ ಪ್ರಯತ್ನ ಮಾಡಿದ್ದಾರೆ. ಆದರೆ, ಅಂತಹ ಯಾವುದೇ ಕ್ರಮಗಳನ್ನ ಅಣ್ಣಿಗೇರಿ ಪಟ್ಟಣದಲ್ಲಿ ತೆಗೆದುಕೊಂಡಿಲ್ಲ ಎಂದು ಪೊಲೀಸ್ ಇಲಾಖೆ ಖಚಿತಪಡಿಸಿದೆ.
ಕುರಿ ಕಾಳಗದಲ್ಲಿ ನಡೆದ ಗೊಂದಲವನ್ನೇ ರಂಚಿತವಾಗಿ ಬಿಂಬಿಸುವ ಪ್ರಯತ್ನ ನಡೆದಿದೆಯಷ್ಟೇ. ಅದನ್ನ ಬಿಟ್ಟು ಅಣ್ಣಿಗೇರಿ ಸಂಪೂರ್ಣವಾಗಿ ಎಂದಿನಂತೆ ಇದೆ.