ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು…!
1 min readತಮಿಳುನಾಡು: ರಾಜ್ಯದ ಅರವಕುರಿಚಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಮಾಜಿ ಐಪಿಎಸ್ ಅಧಿಕಾರಿ ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ವಿರುದ್ಧ ಬೆದರಿಕೆಯ ದೂರು ದಾಖಲಾಗಿದೆ.
ಡಿಎಂಕೆ ಅಭ್ಯರ್ಥಿ ಸೆಂದಿಲ್ ಬಾಲಾಜಿ ವಿರುದ್ಧ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತಮ್ಮನ್ನು ಚರ್ಮ ಸುಲಿಯುವಂತೆ ಹೊಡೆಯುವುದಾಗಿ ಅಣ್ಣಾಮಲೈ ಬೆದರಿಸಿದ್ದು, ಇದನ್ನ ನಾನು ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದಾಗ ಮಾಡಿ ತೋರಿಸಿದ್ದಾಗಿ ಹೇಳಿದ್ದಾರೆಂದು ದೂರಿನಲ್ಲಿ ವಿವರಿಸಲಾಗಿದೆ.