ಅಣ್ಣಾಮಲೈ ಬಿಜೆಪಿಗೆ ಸೇರಲು ಕಾರಣವಾಗಿದ್ದು ಯಾರೂ ಗೊತ್ತಾ..?: ಹೀಗೆ ಶುರುವಾಗಿತ್ತು..!
ಬೆಂಗಳೂರು: ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅಣ್ಣಾಮಲೈ ಸೋಷಿಯಲ್ ಮೀಡಿಯಾದಿಂದ ಎಲ್ಲರಿಗೂ ಪರಿಚಯವಾಗಿದ್ದು, ನಂತರ ಕನ್ನಡದ ಸಿಂಗಂ ಎಂದು ಕರೆದಿದ್ದು ಎಲ್ಲವೂ ಗೊತ್ತಿರೋ ವಿಚಾರವೇ. ಆದರೆ, ಇಂದು ಬಿಜೆಪಿಗೆ ಸೇರಿರುವ ಮಾಜಿ ಐಪಿಎಸ್ ಅಧಿಕಾರಿಯನ್ನ ಭಾರತೀಯ ಜನತಾ ಪಕ್ಷಕ್ಕೆ ಕರೆದುಕೊಂಡು ಬಂದಿದ್ದು ಯಾರೂ ಗೊತ್ತಾ.. ವರದಿಯನ್ನ ಪೂರ್ಣವಾಗಿ ಓದಿ.
ಇಂದು ನವದೆಹಲಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಣ್ಣಾಮಲೈ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಮುರುಳಿಧರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಆದರೆ, ಅಲ್ಲಿ ಇರಬೇಕಾದವರು ಮಾತ್ರ ಕಾಣಲೇ ಇಲ್ಲ.
ಪಕ್ಕದ ಆಯಕಟ್ಟಿನ ಜಾಗದಲ್ಲಿದ್ದರೂ ಎಲ್ಲಿಯೂ ಕಾಣದ ಬಿ.ಎಲ್.ಸಂತೋಷರೇ ಅಣ್ಣಾಮಲೈ ಪಕ್ಷಕ್ಕೆ ಬರಲು ಕಾರಣ ಎಂಬುದನ್ನ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಹೊರಹಾಕಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಪ್ರತಾಪ ಸಿಂಹ, ಸಂತೋಷ ಅವರ ದಕ್ಷತೆಯನ್ನ ಸ್ಮರಿಸಿದ್ದಾರೆ.
ಕರ್ನಾಟಕದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತ ಬೆಂಗಳೂರಿಗೆ ಬಂದು ಡಿಸಿಪಿಯಿದ್ದಾಗಲೇ ಅಣ್ಣಾಮಲೈ ರಾಜೀನಾಮೆ ನೀಡಿದ್ದರು. ಇದೇ ಸಮಯದಲ್ಲಿಯೇ ಇಂತಹ ತೀರ್ಮಾನಕ್ಕೆ ಬರಲು ಕಾರಣವಾಗಿದೆ. ಆ ಸಮಯದಲ್ಲೇ ಬಿ.ಎಲ್.ಸಂತೋಷರಿಂದ ಪಕ್ಷಕ್ಕೆ ಕರೆತರುವ ಪ್ರಯತ್ನ ಸಫಲವಾಗಿದೆ.