ಹಾವೇರಿ ಕಳ್ಳರ ಬಂಧನ- ಮನೆಯೂಟ ಮಾಡಿ ಕನ್ನ ಹಾಕಿದ ಆಸಾಮಿಗಳು
ಉತ್ತರ ಕನ್ನಡ: ತಾವೇ ಕೆಲಸ ಮಾಡುವ ಕಚೇರಿ ಹಾಗೂ ಮಾಲೀಕನ ಮನೆಯನ್ನ ಕಳ್ಳತನ ಮಾಡಿದ ನಾಲ್ಕು ಜನ ಯುವಕರ ತಂಡವನ್ನ ಪತ್ತೆ ಹಚ್ಚುವಲ್ಲಿ ಅಂಕೋಲ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಅಂಕೋಲ ಠಾಣೆಯ ಪಿ.ಎಸ್.ಐ ಸಂಪತ್ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ 3,72,100 ಮೌಲ್ಯದ ಮನೆ ಮತ್ತು ಕೇಬಲ್ ಆಫೀಸ್ ನಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದು ನಾಲ್ಕು ಜನರನ್ನು ಬಂಧಿಸಿದ್ದಾರೆ.
ಅಂಕೋಲದ ಹುಲಿದೇವರವಾಡದ ರಾಜು ನಾಯ್ಕ ಎಂಬುವವರ ಕೇಬಲ್ ಟಿವಿ ಆಫೀಸ್ ಮತ್ತು ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು.ಕಳ್ಳತನ ನಡೆದ ಕೆಲವೇ ದಿನದಲ್ಲಿ ಹಾವೇರಿ ಮೂಲದ ಇಮ್ರಾನ್, ಮುಬಾರಕ್, ಬಸವರಾಜ್, ಮಲ್ಲಿಕ್ ಜಾನ್ ನನ್ನು ಬಂಧಿಸಿದ್ದಾರೆ.
ಬಂಧಿತರಿಂದ ಜಿಯೋ ವೈಫೈ, 20,500 ರು ನಗದು ಹಣ, ಹುಂಡೈ ಕಾರು, ಫೈರ್ ಹೋಲ್ ಮಿಷಿನ್ ಸೇರಿದಂತೆ ಒಟ್ಟು ಮೌಲ್ಯ 3,72,100 ರೂಗಳ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಎ.ಎಸ್.ಐ ಅಶೋಕ್ ತಳದಪ್ಪನವರ್, ಸಿಬ್ಬಂದಿಗಳಾದ ಮಂಜುನಾಥ, ಶ್ರೀಕಾಂತ್, ಮನೋಜ್.ಡಿ, ಸಂತೋಷ್ ಕುಮಾರ್, ಜಗದೀಶ್ ನಾಯ್ಕ, ಆಸೀಪ್, ಸುರೇಶ್.ಬಿ, ಹಾಗೂ ಯಲ್ಲಾಪುರ ಠಾಣೆಯ ಮುಖ್ಯ ಪೇದೆ ಮಹ್ಮದ್ ಶಫಿ ಶೇಖ್, ಕೋಟೇಶ್ ಕಾಯಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.