ಸರಳ ಸಜ್ಜನಿಕೆಯ ಸರಕಾರಿ ಶಾಲೆಯ ಶಿಕ್ಷಕ ಇನ್ನಿಲ್ಲ…!

ಅಂಕಲಗಿ: ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ S.G ಹ್ಯಾಳದ ನಿಧನರಾಗಿದ್ದು, ಶಿಕ್ಷಕ ವಲಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.

ಶಿಕ್ಷಕ ಹ್ಯಾಳದ ಅವರು ದೊಡ್ಡವರಲ್ಲಿ ದೊಡ್ಡವರಂತೆ, ಚಿಕ್ಕವರಲ್ಲಿ ಚಿಕ್ಕವರಂತೆ ಎಲ್ಲರೊಂದಿಗೆ ಸಹಬಾಳ್ವೆಯಿಂದ ಇರುತ್ತಿದ್ದರು. ಸದಾಕಾಲ ಶೈಕ್ಷಣಿಕ ಬೆಳವಣಿಗೆ ಮತ್ತು ಉನ್ನತ್ತಿಕರಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರು.
ಕಳೆದ ಮೂರ್ನಾಲ್ಕು ದಿನದಿಂದ ಅನಾರೋಗ್ಯಕ್ಕೀಡಾಗಿದ್ದ ಶಿಕ್ಷಕ ಹ್ಯಾಳದ, ಇಂದು ಆರೋಗ್ಯದಲ್ಲಿ ತೀವ್ರವಾದ ಏರುಪೇರಾಗಿ ಸಾವಿಗೀಡಾಗಿದ್ದಾರೆ. ಸಾವಿಗೆ ನಿಖರವಾದ ಕಾರಣ ಗೊತ್ತಾಗಿಲ್ಲವಾದರೂ, ಕೋವಿಡ್-19 ಬಗ್ಗೆ ತಪಾಸಣೆಗೆ ಕಳಿಸಲಾಗಿದೆ.
ಶಿಕ್ಷಕ ಹ್ಯಾಳದ ಅವರ ಸಾವಿನಿಂದ, ಅಂಕಲಗಿ ಗ್ರಾಮದಲ್ಲಿಯೂ ನೀರವಮೌನ ಆವರಿಸಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಶಿಕ್ಷಕ ಸಂಘಟನೆಗಳು ಹಾಗೂ ಪ್ರಮುಖರು ಪ್ರಾರ್ಥಿಸಿದ್ದಾರೆ.