ಧಾರವಾಡ ಅಂಜುಮನ್ “ಕಡ್ಡಿ ಆಡಿಸೋರಿಗೆ” ಕಿಕ್ ಕೊಟ್ಟ “ಮುಸ್ಲಿಂ ಸಮುದಾಯ”- IT ಅಧ್ಯಕ್ಷ, ಕಳ್ಳಿಮನಿ ಜಂಟಿ ಕಾರ್ಯದರ್ಶಿ…

ಧಾರವಾಡ: ಪ್ರತಿಷ್ಠಿತ ಅಂಜುಮನ್ ಸಂಸ್ಥೆಯ ಚುನಾವಣೆಯಲ್ಲಿ ಪ್ರತಿಸಲವೂ ಬೇರೆ ಸಮುದಾಯದ ಕೆಲವರು ಗೊಂದಲವುಂಟು ಮಾಡುವುದನ್ನ ಅರಿತಿರುವ ಮುಸ್ಲಿಂ ಸಮಯದಾಯದ ಜನರು, ಈ ಬಾರಿ ಒಂದಾಗಿ ಚುನಾವಣೆ ಎದುರಿಸಿ, ಅವಿರೋಧ ಆಯ್ಕೆಯಾಗಿದ್ದಾರೆ.
ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾಗಿ ಇಸ್ಮಾಯಿಲ್ ತಮಟಾಗಾರ ಅಧ್ಯಕ್ಷರಾಗಿಯೂ, ಶಫಿ ಕಳ್ಳಿಮನಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ನಾಳೆಗೆ ಅಧಿಕೃತವಾಗಿ ಆಯ್ಕೆ ಹೊರ ಬೀಳಲಿದೆ.
ಧಾರವಾಡ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಜುಮನ್ ಸಂಸ್ಥೆ ಅಧ್ಯಕ್ಷ ಚುನಾವಣೆಯಲ್ಲಿ ಇಸ್ಮಾಯಿಲ್ ತಮಟಗಾರ ಅವಿರೋಧ್ ಆಯ್ಕೆ ಖಚಿತ.
ಶತಮಾನದ ವೈರತ್ವ ಮರೆತು ಸಮಾಜಕ್ಕಾಗಿ ತಮಟಗಾರ ಹಾಗೂ ಕಳ್ಳಿಮನಿ ಕುಟುಂಬ ಒಟ್ಟಾಗಿ ಚುನಾವಣೆಯನ್ನ ನೋಡಿಕೊಂಡಿದ್ದರು. ಧಾರವಾಡ ಅಂಜುಮನ್ ಚುನಾವಣೆ ಘೋಷಣೆಯಾಗಿ 15 January 3:00pm ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಇಸ್ಮಾಯಿಲ್ ತಮಟಗಾರ್ ತಂಡವನ್ನ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಆದರೆ, ಚುನಾವಣೆ ಆಯ್ಕೆಯ ಪ್ರಕ್ರಿಯೆಗೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿಸಲು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸಿದ್ದವು.
ಸಿಂಗಲ್ ಬೆಂಚ್ ಹಾಗೂ ವಿಭಾಗೀಯ ಪೀಠ ಅವರ ಮನವಿಯನ್ನು ವಜಾಗೊಳಿಸಿದೆ. ಇಸ್ಮಾಯಿಲ್ ಅವರಿಗೆ ಅಧ್ಯಕ್ಷರಾಗಲು ಅವಕಾಶ ನೀಡಿದರೆ ಧಾರವಾಡ ಜಿಲ್ಲಾ ಕಾಂಗ್ರೆಸ್ ರಾಜಕಾರಣದ ಲೆಕ್ಕಾಚಾರವೇ ಬದಲಾಗಲಿದೆ ಎಂಬ ಕಾರಣಕ್ಕೆ ಬೇರೆ ಸಮುದಾಯದ ರಾಜಕಾರಣಿ ತಮ್ಮ ಬೆಂಬಲಿಗರಿಗೆ ಹೈಕೋರ್ಟ್‌ನಲ್ಲಿ ಚುನಾವಣೆಗೆ ತಡೆಗಾಗಿ ಧನಸಹಾಯ ಮಾಡಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು.
ಇದೆಲ್ಲದರ ಹೊರತಾಗಿ ಇಸ್ಮಾಯಿಲ್ ತಮಟಗಾರ್ ತಂಡದ ವಿರುದ್ಧ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿಲ್ಲ. ಈ ಚುನಾವಣೆಯ ಫಲಿತಾಂಶ ಇನ್ನೂ ಎಲ್ಲರಿಗೂ ಬೇರೆಯದ್ದೆ ಸಂದೇಶ ರವಾನಿಸಿದೆ.