ಧಾರವಾಡ ಅಂಜುಮನ್ ಚುನಾವಣೆ: ಇಸ್ಮಾಯಿಲ ತಮಾಟಗಾರ ಬಣ ಮುನ್ನಡೆ
ಧಾರವಾಡ: ಕಳೆದ ಏಳು ತಿಂಗಳ ಹಿಂದೆ ನಡೆದ ಅಂಜುಮನ ಸಂಸ್ಥೆಯ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು, ಐದನೇಯ ಸುತ್ತಿನವರೆಗೆ ಇಸ್ಮಾಯಿಲ ತಮಾಟಗಾರ ಬಣ ಮುನ್ನಡೆ ಸಾಧಿಸಿದೆ.
ಇಮ್ರಾನ್ ಕಳ್ಳಿಮನಿ ವರ್ಸಸ್ ಇಸ್ಮಾಯಿಲ ತಮಾಟಗಾರ ಚುನಾವಣೆಯಂದೇ ಬಿಂಬಿಸಲಾಗಿರುವ ಈ ಚುನಾವಣೆಯಲ್ಲಿ ಇಸ್ಮಾಯಿಲ ತಮಾಟಗಾರ ತಮ್ಮ ಬಣವನ್ನ ಕಣಕ್ಕೆ ಇಳಿಸಿದ್ದಾರೆ.
ಬೆಳಿಗ್ಗೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಇಲ್ಲಿಯವರೆಗೆ ಇಸ್ಮಾಯಿಲ ತಮಾಟಗಾರ ಬಣ 2146 ಮತಗಳನ್ನ ಪಡೆದರೇ, ಎದುರಾಳಿ ಬಣ 404 ಮತಗಳನ್ನ ಪಡೆದಿದೆ. ಮತಗಳ ಅಂತರ ಹೆಚ್ಚಾಗಿದ್ದರೂ, ಇಸ್ಮಾಯಿಲ ತಮಾಟಗಾರ ಬಣದ ವಿರುದ್ಧ 200 ಮತಗಳನ್ನೂ ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಈಗಾಗಲೇ 404 ಮತಗಳನ್ನೂ ಪಡೆದಿದ್ದು ಕೂಡಾ ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ.
ಕೆಲವು ಪ್ರದೇಶಗಳಲ್ಲಿ ಮತಗಳು ಇಮ್ರಾನ ಕಳ್ಳಿಮನಿ ಬಣಕ್ಕೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದು, ಇನ್ನೂ ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾದ ಮಾಹಿತಿ ಲಭ್ಯವಾಗಲಿದೆ.