ಮೂಕ ಪ್ರಾಣಿಯ ಮೂಕ ರೋಧನ: ವಾಣಿಜ್ಯನಗರಿಯ ‘ತಾಯಿ ಪ್ರೀತಿ’
ಹುಬ್ಬಳ್ಳಿ: ಆಕೆ ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅದನ್ನ ಮತ್ತಷ್ಟು ಪ್ರೀತಿಯಿಂದ ಸಾಕುತ್ತಿದ್ದಳು. ತನಗೆ ತಿನ್ನಲು ಏನೂ ಸಿಗದಿದ್ದರೂ ಪರ್ವಾಗಿಲ್ಲ, ತನ್ನ ಮಗುವಿಗೆ ಮಾತ್ರ ಹಾಲನ್ನ ಉಣಿಸುತ್ತಲೇ ಇರುತ್ತಿದ್ದಳು.. ಆದ್ರೇ, ಅಷ್ಟೊಂದು ಪ್ರೀತಿಯಿಂದ ಸಾಕಿದ ತನ್ನ ಕರುಳಕುಡಿಯನ್ನ ರಸ್ತೆಯಲ್ಲಿ ಹೆಣವಾಗಿ ನೋಡಿ, ತಾಯಿಯ ಸ್ಥಿತಿ ಏನಾಗಿರಬೇಡಾ..
ಹುಬ್ಬಳ್ಳಿಯ ಜನನಿಬೀಡ ಪ್ರದೇಶದಲ್ಲಿ ನಾಲ್ಕು ತಿಂಗಳ ಕರುವೊಂದು ಚೆಂಗಾಟವಾಡುತ್ತಿದ್ದಾಗಲೇ ಕಾರು ಡಿಕ್ಕಿ ಹೊಡೆದು, ಸ್ಥಳದಲ್ಲಿಯೇ ಅದು ತೀರಿಕೊಂಡಿದೆ. ತನ್ನ ಮುಂದೆ ಓಡಾಡುತ್ತಿದ್ದ, ಪ್ರೀತಿಯಿಂದ ಸಾಕಿದ ಕರುಳುಕುಡಿ ಇಲ್ಲದ್ದನ್ನ ಮನಗಂಡ ಆಕಳು, ಮೃತದೇಹದ ಮುಂದೆ ನಿಂತು ರೋಧಿಸುತ್ತಿತ್ತು.
ಕಾರು ಡಿಕ್ಕಿ ಹೊಡೆದಾತ, ಕರುವಿಗೆ ನೀರು ಹಾಕುವ ಪ್ರಯತ್ನವನ್ನ ಮಾಡಿದ್ರು, ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿಯೇ, ತಾಯಿ ಆಕಳು, ರಸ್ತೆಯಲ್ಲೇ ಕೆಲವು ಹೊತ್ತು ನಿಂತು.. ಮಗುವಿನ ಕೊನೆಯ ದರ್ಶನ ಮಾಡಿತು. ಈ ದೃಶ್ಯವನ್ನ ನೋಡಿ ಅನೇಕರು ಕಣ್ಣೀರಾದ ಘಟನೆಯೂ ನಡೆಯಿತು.