ಅನಿಲ ಅಂಬಾನಿಗೆ ಇಡಿ ವಿಚಾರಣೆ: ಯೆಸ್ ಬ್ಯಾಂಕ್ ಸಾಲ ಪಡೆಯಲು ಕಿಕ್ ಬ್ಯಾಕ್ ಹಣ

ಮುಂಬೈ: ಬೃಹತ್ ಮೊತ್ತದ ಸಾಲ ನೀಡಲು 4300 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದ ಹಾಗೂ ಅಸಮರ್ಪಕ ದಾಖಲೆಯುಳ್ಳ ಆಸ್ತಿಗಳ ಮೇಲೆ ಸಾಲ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಯೆಸ್ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ರಾಣಾಕಪೂರ್ ಜೊತೆ ಸಂಪರ್ಕ ಹೊಂದಿರುವ ರಿಲೈಯಸ್ನ್ ಗ್ರೂಪ್ ಅಧ್ಯಕ್ಷ ಅನಿಲ ಅಂಬಾನಿಯವರನ್ನ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿದೆ.
ಸೋಮವಾರವೇ ವಿಚಾರಣೆಗೆ ಹಾಜರಾಗಬೇಕಿದ್ದ ಅಂಬಾನಿ ಅವತ್ತು ಗೈರಾಗಿದ್ದರು. ಹಾಗಾಗಿ ಮತ್ತೆ ಅವರನ್ನ ವಿಚಾರಣೆಗೆ ಕರೆದು ಮಾಹಿತಿಯನ್ನ ಪಡೆದಿದ್ದಾರೆ. ಈಗಾಗಲೇ ತಾವು ಪಡೆದಿರುವ ಸಾಲವನ್ನ ಮರುಪಾವತಿ ಮಾಡಲು ರಿಲೈಯನ್ಸ್ ಸಮೂಹ ಸಂಸ್ಥೆ ಬದ್ಧವಾಗಿದೆ ಎಂದು ಅನಿಲ ತಿಳಿಸಿದ್ದರು.