ಬ್ಯಾಹಟ್ಟಿಯಲ್ಲಿ ಅಂದರ್-ಬಾಹರ್: ನಾಲ್ವರ ಬಂಧನ, ಇಬ್ಬರು ಪರಾರಿ

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದ ಕೆರೆಯ ಒಂಡೆಯ ಮೇಲೆ ಅಂದರ್-ಬಾಹರ್ ಆಡುತ್ತಿದ್ದ ನಾಲ್ವರನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಮತ್ತೀಬ್ಬರು ಪರಾರಿಯಾಗಿದ್ದಾರೆ.
ಗ್ರಾಮದ ಕೆರೆಯ ದಂಡೆಯಲ್ಲಿ ತಮ್ಮ ಲಾಭಕ್ಕೋಸ್ಕರ ಅಂದರ್-ಬಾಹರ್ ಆಡುತ್ತಿದ್ದ ಬ್ಯಾಹಟ್ಟಿ ಗ್ರಾಮದ ಕಲ್ಲಪ್ಪ ಶಿವಪ್ಪ ಹಳಗಟ್ಟಿ, ಕುಸುಗಲ್ ಗ್ರಾಮದ ದ್ಯಾಮಪ್ಪ ಯಲ್ಲಪ್ಪ ಕಾರಲಕೊಪ್ಪ, ಬ್ಯಾಹಟ್ಟಿ ಗ್ರಾಮದ ಅಶೋಕ ಹುಬ್ಬಳ್ಳಿ, ಮಲ್ಲನಗೌಡ ಹನಮಂತಗೌಡ ಬಸನಗೌಡ್ರ ಬಂಧಿತರಾಗಿದ್ದು, ಬ್ಯಾಹಟ್ಟಿ ಗ್ರಾಮದ ವೀರನಗೌಡ ರುದ್ರಗೌಡ ಮೇಲಿನಮನಿ ಹಾಗೂ ಈರಪ್ಪ ಮಹಾದೇವಪ್ಪ ಬೇಗೂರ ಪರಾರಿಯಾಗಿದ್ದಾರೆ.
ಬಂಧಿತರಿಂದ 16010 ರೂಪಾಯಿ ನಗದು ಹಾಗೂ ಅಂದರ್-ಬಾಹರಗೆ ಬಳಕೆಯಾಗುತ್ತಿದ್ದ 52 ಇಸ್ಪೀಟ್ ಎಲೆಗಳನ್ನ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ರಮೇಶ ಗೋಕಾಕ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಾರ್ಯಾಚರಣೆಗೆ ಠಾಣೆಯ ಸಿಬ್ಬಂದಿಗಳು ಸಾಥ್ ನೀಡಿದ್ದರು.