ನಿಮ್ಮ “ಅಣ್ಣನೋ-ತಮ್ಮನೋ” ಅದ್ಕೊಂಡು ಹೊಟ್ಯಾಗ್ ಹಕ್ಕೋರಿ: ಭಾವುಕರಾದ ಶಾಸಕ ಅಮೃತ ದೇಸಾಯಿ…
1 min readಧಾರವಾಡ: ಕಳೆದ ನಾಲ್ಕೂವರೆ ವರ್ಷದಲ್ಲಿ ಕೆಲವೊಂದಿಷ್ಟು ಹೆಚ್ಚು-ಕಡಿಮೆ ಆಗಿವೆ. ಕಾರ್ಯಕರ್ತರ ಮನಸ್ಸಿಗೆ ಬೇಸರವಾಗಿರಬಹುದು. ಅದನ್ನೇಲ್ಲ ನಾನು ನಿಮ್ಮ ಅಣ್ಣ-ತಮ್ಮ ಎಂದು ತಿಳಿದುಕೊಂಡು ಹೊಟ್ಟೆಯೊಳಗೆ ಹಾಕಿಕೊಳ್ಳೀರಿ ಎಂದು ಶಾಸಕ ಅಮೃತ ದೇಸಾಯಿ ಭಾವುಕರಾಗಿ ಹೇಳಿದರು.
ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಧಾರವಾಡ 71 ಕ್ಷೇತ್ರದಲ್ಲಿ ಗೂಂಡಾಗಿರಿ, ಜೂಜಾಟ ನಡೆಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ವಾಗ್ಧಾನ ಮಾಡಿದ್ದೆ. ಹಾಗೇ ನಡೆದುಕೊಂಡಿದ್ದೇನೆ. ಕಾರ್ಯಕರ್ತರೇ ಪಕ್ಷದ ಶಕ್ತಿ. ಎಲ್ಲರೂ ಕೂಡಿಕೊಂಡು ಬರುವ ಚುನಾವಣೆಯಲ್ಲಿ ಜಯಭೇರಿ ಬಾರಿಸೋಣ ಎಂದರು.