ಅಮ್ಮಿನಬಾವಿಯಲ್ಲಿ ವಿಕಲಚೇತನರಿಗೆ ಕೋವಿಡ್ ಲಸಿಕೆ…!
1 min readಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರಿಗೆ ಕೋವಿಡ್ ಲಸಿಕೆಯನ್ನ ಸರಕಾರದ ಆದೇಶದ ಮೇರೆಗೆ ಹಾಕಿಸಲಾಯಿತು.
ಡಾ.ಬೀನಾ ಹಾಗೂ ಧಾರವಾಡ ತಾಲೂಕು ಎಂಆರ್ ಡಬ್ಲೂ ಬಸವರಾಜ ಬೆಳಾರದ ಉಪಸ್ಥಿತಿಯಲ್ಲಿ 25ಕ್ಕೂ ಹೆಚ್ಚು ವಿಕಲಚೇತನರಿಗೆ ಕೋವಿಡ್ ಲಸಿಕೆಯನ್ನ ಹಾಕಿಸಲಾಯಿತು.
ಈರಣ್ಣ ನಡಗಡ್ಡಿ, ಕಸ್ತೂರಿ ಪೂಜಾರ, ರೇಣುಕಾ ಹಿರೇಹಳ್ಳಿ ಸೇರಿದಂತೆ ಹಲವರು ಈ ಸಮಯದಲ್ಲಿ ಉಪಸ್ಥಿತರಿದ್ದರು. ವಿಶೇಷಚೇತನರಿಗೆ ಕೋವಿಡ್ ಲಸಿಕೆ ನೀಡುವುದಕ್ಕೆ ಆದ್ಯತೆ ಮೇರೆಗೆ ಅವಕಾಶವನ್ನ ನೀಡಲಾಗಿದೆ.