ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಅಲ್ತಾಪನವಾಜ್ ಕಿತ್ತೂರ ವಿರುದ್ಧ ಪ್ರಕರಣ ದಾಖಲು…!

ಹುಬ್ಬಳ್ಳಿ: ಕೊರೋನಾ ನಿಯಮಗಳನ್ನ ಮೀರಿ ಹುಟ್ಟುಹಬ್ಬ ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫನವಾಜ್ ಕಿತ್ತೂರ ಅವರ ವಿರುದ್ಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೇಹುಬ್ಬಳ್ಳಿಯ ಅಲ್ತಾಪನಗರದಲ್ಲಿ ಬರ್ತಡೇ ಮಾಡಿಕೊಂಡು ಕೊರೋನಾ ನಿಯಮಗಳನ್ನ ಗಾಳಿಗೆ ತೂರಲಾಗಿದ್ದು, ಸಾಮಾಜಿಕ ಅಂತರವನ್ನ ಮರೆತು ನಡೆದುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಮಾಸ್ಕ್ ಹಾಕಿಕೊಳ್ಳದೇ ಇರುವುದರಿಂದ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.