Posts Slider

Karnataka Voice

Latest Kannada News

ಪಡಿತರ ಅಕ್ಕಿ ಸಮೇತ ಮಂಜುನಾಥ ಹರ್ಲಾಪುರ ಬಂಧನ: ಗೋಡೌನದಲ್ಲೂ ‘ಸಿಕ್ಕಕ್ಕಿ’

Spread the love

ಬೆಳಗಾವಿ: ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿಯನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಹುಬ್ಬಳ್ಳಿಯ ಮಂಜುನಾಥ ಹರ್ಲಾಪುರ ಸೇರಿದಂತೆ ಮೂವರನ್ನ ಬಂಧಿಸುವಲ್ಲಿ ಬೈಲಹೊಂಗಲ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೈಲಹೊಂಗಲ-ಬೆಳಗಾವಿ ರಸ್ತೆಯ ಗದ್ದಿಕರವಿನಕೊಪ್ಪ ಕ್ರಾಸ್ ಹತ್ತಿರ ಸಂಶಯಾಸ್ಪದವಾಗಿ ಸಿಕ್ಕ ಲಾರಿ ಕೆಎ-63/ 5626 ಯನ್ನ ತಂದು ತಪಾಸಣೆ ಮಾಡಿರುವ ಪೊಲೀಸರು ಅದ್ರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯಿದೆ ಎಂದು ಪ್ರಕರಣ ದಾಖಲು ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಡಿತರ ಅಕ್ಕಿಯ ಮಾಲೀಕ ಹುಬ್ಬಳ್ಳಿಯ ಬಿಡನಾಳದ ಮಂಜುನಾಥ ವಿರುಪಾಕ್ಷಪ್ಪ ಹರ್ಲಾಪುರ, ಲಾರಿ ಚಾಲಕ ಹುಬ್ಬಳ್ಳಿ ಪತೇಶಾನಗರದ ನಿವಾಸಿಗಳಾದ ಜಮಾಲಖಾನ ಸತ್ತಾರಖಾನ ಪಠಾಣ ಹಾಗೂ ಲಾರಿ ಕ್ಲೀನರ್ ದಿಲಾವರಖಾನ ಸತ್ತಾರಖಾನ ಪಠಾಣ ಎಂಬುವವರನ್ನ ಬಂಧನ ಮಾಡಿದ್ದಾಗಿ ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಐದು ಲಕ್ಷ ಮೌಲ್ಯದ 50 ಕೆಜಿ ತೂಕದ 500 ಪಡಿತರ ಅಕ್ಕಿ ತುಂಬಿದ ಚೀಲಗಳು ಹಾಗೂ ಎಂಟು ಲಕ್ಷ ಮೌಲ್ಯದ ಲಾರಿಯನ್ನ ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೇ, ಬಂಕಾಪುರ ಚೌಕದಲ್ಲಿರುವ ಗೋಡೌನದಲ್ಲಿರುವ 2ಲಕ್ಷ 39ಸಾವಿರ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದು, ಗೋಡೌನ ವಶಕ್ಕೆ ಪಡೆದು, ಪೊಲೀಸ್ ಕಾವಲು ಹಾಕಲಾಗಿದೆ.

ಬೈಲಹೊಂಗಲ ವೃತ್ತ ನಿರೀಕ್ಷಕ ಯು.ಎಚ್.ಸಾತೇನಹಳ್ಳಿ ನೇತೃತ್ವದಲ್ಲಿ ಪಿಎಸೈ ಈರಪ್ಪ ರಿತ್ತಿ, ಸಿಬ್ಬಂದಿಗಳಾದ ಡಿ.ವೈ.ನಾಯ್ಕರ, ಯು.ಎಚ್.ಪೂಜೇರ, ಎಲ್.ಬಿ.ಹಮಾಣಿ ಸೇರಿದಂತೆ ಆಹಾರ ನಿರೀಕ್ಷಕ ವೀರಭದ್ರ ಸೇಬನ್ನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *