ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೊರೋನಾ ವಾರಿಯರ್ಸ್ ಆತ್ಮೀಯ ಸತ್ಕಾರ
ಹುಬ್ಬಳ್ಳಿ: ದೇಶದ ಮೂಲೆ ಮೂಲೆಯಿಂದ ಬಂದ ಪ್ರಯಾಣಿಕರನ್ನ ಗೌರವದಿಂದ ಬರಮಾಡಿಕೊಂಡು ನಿರಂತರ ಸೇವೆ ಸಲ್ಲಿಸುತ್ತಿರುವ ವಿಮಾನ ನಿಲ್ದಾಣದಲ್ಲಿನವರಿಗೆ ಆತ್ಮೀಯ ಸತ್ಕಾರ ಮಾಡಲಾಯಿತು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೊರೋನಾ ವಾರಿಯರ್ಸ್ ಗೆ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೊದ ಟಾಕರೆ, ಇಂಡಿಗೊ ಸಂಸ್ಥೆಯ ವ್ಯವಸ್ಥಾಪಕ ಬೋಪಣ್ಣ ವಾರಿಯರ್ಸ್ ಗಳಾದ ವಿನಾಯಕ ಜವಳಿ, ಸಂತೋಷಿ ಬಾಳಣ್ಣವರ ಸೇರಿದಂತೆ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿದರು.
ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುವುದು ನಮಗೆ ಸ್ಪೂರ್ತಿಯಾಗಿದೆ ಎಂದು ಸತ್ಕರಿಸಿದ ಪ್ರಮುಖರು ಹೇಳಿದರು.