Posts Slider

Karnataka Voice

Latest Kannada News

‘AICC’ ಯಲ್ಲಿ ಮಿಂಚುತ್ತಿರುವ ಕನ್ನಡತಿ ಡಾ.ಸೀಮಾ ಸಾಧೀಕಾ…!!!

1 min read
Spread the love

ನವದೆಹಲಿ: ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಮ್ಮ ಕೆಲಸದಿಂದ ಸಾಕಷ್ಟು ಜನರಿಗೆ ಬೇಕಾಗಿರುವ ಕನ್ನಡತಿ ಡಾ.ಸೀಮಾ ಸಾಧೀಕಾ ಅವರು ಎಐಸಿಸಿಯಲ್ಲಿ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆಯರ ಜೊತೆಗೂಡಿ ಕಮಾಲ್ ಮಾಡುತ್ತಿರುವುದು ರಾಜ್ಯದ ಮಹಿಳಾ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಮೂಡಿಸಿದೆ.

ಕಾಂಗ್ರೆಸ್ ಮಹಿಳಾ ರಾಷ್ಟ್ರೀಯ ಅಧ್ಯೆಕ್ಷೆಯಾದ ನೆಟ್ಟಾ ಡಿಸೋಜಾ ಮಾರ್ಗದರ್ಶನದಲ್ಲಿ ಡಾ.ಸೀಮಾ ಸಾಧೀಕಾ ಅವರು ಹಲವು ಮಹಿಳಾ ಕಾರ್ಯಕ್ರಮಗಳನ್ನ ಆಯೋಜನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ನವದೆಹಲಿಯಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಸಮಾವೇಶ ಯಶಸ್ವಿಗೊಂಡಿದ್ದು, ಇದಕ್ಕೆ ಸ್ವತಃ ರಾಹುಲ ಗಾಂಧಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಾ.ಸೀಮಾ ಸಾಧೀಕಾ ಅವರು ಧಾರವಾಡ ಜಿಲ್ಲೆಯಲ್ಲಿ ಕೂಡಾ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನ ಅವರ ‘ನಮ್ಮ ಮಿತ್ರ’ ಪೌಂಢೇಷನ್ ಮೂಲಕ ಆಯೋಜನೆ ಮಾಡಿದ್ದರು. ಹಲವು ಗ್ರಾಮಗಳಿಗೆ ಸೋಲಾರ್ ವ್ತವಸ್ಥೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೋಲಾರ ಲೈಟ್, ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ತರಕಾರಿ ಮಾರಾಟ ಮಾಡುವವರಿಗೆ ಸೋಲಾರ ಲೈಟ್, ರೈತರಿಗೆ ಎಣ್ಣೆ ಹೊಡೆಯಲು ಸ್ಪ್ರೇಯರ್ ಸೇರಿದಂತೆ ಹಲವು ಉಪಕರಣಗಳನ್ನ ನೀಡಿದ್ದರು. ಇದರ ಜೊತೆಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ಅಂಗನವಾಡಿಗೂ ವಾಟರ್ ಫಿಲ್ಟರ್ ಕೂಡಾ ನೀಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.

ಮಾನವೀಯ ಗುಣ ಹೊಂದಿರುವ ಡಾ.ಸೀಮಾ ಸಾಧೀಕಾ ಅವರು ನವದೆಹಲಿಯಲ್ಲಿ ಎಐಸಿಸಿ ಮಹಿಳಾ ವಿಭಾಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸುತ್ತಿರುವುದು ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ.

ಈ ಬಗ್ಗೆ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ ಹೇಳಿಕೆ..

ನಮ್ಮ ಕನ್ನಡತಿಯೊಬ್ಬರು ಅಲ್ಲಿ ಅಷ್ಟೊಂದು ಆ್ಯಕ್ಟಿವ್ ಆಗಿರೋದು ಬಹಳ ಖುಷಿ ಕೊಡತ್ತೆ. ಮೊನ್ನೆ ನಾವು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ, ಡಾ.ಸೀಮಾ ಸಾಧೀಕಾ ಅವರು ಸಾಕಷ್ಟು ಪ್ರೀತಿಯಿಂದ ನಡೆದುಕೊಂಡರು. ದೇಶದ ಮೂಲೆ ಮೂಲೆಯಿಂದ ಬಂದವರ ನಡುವೆ ನಮ್ಮನ್ನ ಗುರುತಿಸುವಂತೆ ಮಾಡಲು ಡಾ.ಸೀಮಾ ಅವರು ಸಹಾಯ ಮಾಡಿದರು. ಅವರು ಇನ್ನಷ್ಟು ಬೆಳೆಯಲಿ ಎಂದರು.


Spread the love

Leave a Reply

Your email address will not be published. Required fields are marked *

You may have missed