ವಕೀಲ ರವೀಂದ್ರ ಹತ್ಯೆ: ನದಿಯಲ್ಲಿ ಮುಳುಗಿಸಿ ಕಲ್ಲು ಚಪ್ಪಡಿ ಹಾಕಿರೋ ಕಿರಾತಕರು..!

ಮಂಡ್ಯ: ವಕೀಲರೊಬ್ಬರನ್ನ ಬರ್ಭರವಾಗಿ ಹತ್ಯೆಗೈದು ಶಿಂಷಾ ನದಿಯಲ್ಲಿ ಮುಳುಗಿಸಿ ದೇಹ ಮೇಲೆ ಬರದಂತೆ ಕಲ್ಲು ಚಪ್ಪಡಿ ಹಾಕಿರುವ ಪ್ರಕರಣ ಮದ್ದೂರು ತಾಲೂಕಿನ ನವಿಲೆ ಗ್ರಾಮದ ಬಳಿಯಿರುವ ಶಿಂಷಾ ನದಿಯಲ್ಲಿ ಬೆಳಕಿಗೆ ಬಂದಿದೆ.
45 ವರ್ಷದ ನವಿಲೆ ಗ್ರಾಮದ ವಕೀಲ ರವೀಂದ್ರ ಎಂಬುವವರೇ ಕೊಲೆಯಾಗಿದ್ದು, ಬೆಳಿಗ್ಗೆ ಮನೆಯಿಂದ ಜಮೀನಿಗೆ ಹೋಗುವುದಾಗಿ ಹೇಳಿ ಹೋಗಿದ್ದ ವಕೀಲ ರವೀಂದ್ರ ಸಂಜೆಯವರೆಗೂ ಮನೆಗೆ ಮರಳದ ಕಾರಣ, ಮನೆಯವರೆಲ್ಲರೂ ಹುಡುಕಾಟ ನಡೆಸಿದ ಸಮಯದಲ್ಲಿ ಹತ್ಯೆ ಪ್ರಕರಣ ಬಯಲಿಗೆ ಬಂದಿದೆ.
ವಕೀಲರ ಜಮೀನಿನ ಸಮೀಪವಿರುವ ಶಿಂಷಾ ನದಿಯಲ್ಲಿ ಮುಳುಗಿದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಕೊಲೆಗೈದು ಶವವನ್ನು ನದಿಯಲ್ಲಿ ಮುಳುಗಿಸಿ ಶವದ ಮೇಲೆ ಚಪ್ಪಡಿ ಕಲ್ಲನ್ನ ದುಷ್ಕರ್ಮಿಗಳು ಹೇರಿದ್ದಾರೆ.
ಶಿಂಷಾ ನದಿಯಲ್ಲಿ ಅಕ್ರಮ ಮರಳುದಂಧೆಕೋರಿಂದ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.