ಹಿರಿಯ ಕಲಾವಿಧೆ ಕಿಶೋರಿ ಬಲ್ಲಾಳ ಉಸಿರಾಟದ ತೊಂದರೆಯಿಂದ ನಿಧನ

ಬೆಂಗಳೂರು: ರಂಗಭೂಮಿ ಕಲಾವಿದೆ, ಹಿರಿಯ ನಟಿ ಕಿಶೋರಿ ಬಲ್ಲಾಳ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದಾಗಿ ನಿಧನರಾಗಿದ್ದಾರೆಂದು ಅಹಲ್ಯಾ ಬಲ್ಲಾಳ ತಿಳಿಸಿದ್ದಾರೆ.
ಮೂಲತಃ ದಕ್ಷಿಣ ಕನ್ನಡದ ಮಂಗಳೂರಿನವರು ಕಿಶೋರಿ ಬಲ್ಲಾಳ ಅವರು 1960ರಲ್ಲಿ ‘ಇವಳೆಂಥ ಹೆಂಡತಿ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ಕನ್ನಡದ ಹಲವು ಖ್ಯಾತ ನಾಮರೊಂದಿಗೆ ಸುಮಾರು 72 ಸಿನಿಮಾಗಳಲ್ಲಿ ಕಿಶೋರಿ ಅವರು ನಟಿಸಿದ್ದರು. ಶಾರೂಖ್ ನಟನೆಯ ಬಾಲಿವುಡ್ನ ‘ಸ್ವದೇಶ್’ ಸಿನಿಮಾ ಸೇರಿದಂತೆ ಹಲವಾರು ಹಿಂದಿ ಸಿನೇಮಾ, ಜಾಹೀರಾತಿನಲ್ಲಿ ಕಿಶೋರಿ ಬಲ್ಲಾಳ ಅಭಿನಯಿಸಿದ್ದರು.
‘ಕಹಿ, ನಾನಿ, ರಿಂಗ್ ರೋಡ್, ಗಲಾಟೆ, ಅಯ್ಯ, ಕೆಂಪೇ ಗೌಡ, ನಮ್ಮಣ್ಣ’ ಕಿಶೋರಿ ಅವರು ನಟಿಸಿದ ಪ್ರಮುಖ ಚಿತ್ರಗಳು. ಇತ್ತೀಚಿಗೆ ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಕಿಶೋರಿ ನಟಿಸಿದ್ದರು.