“ನೊಂದವರಿಗೆ ಭರವಸೆ” ಮೂಡಿಸಲು ಧಾರವಾಡ “ACP BSB” ಅವರ ಹೊಸ ಪ್ರಯೋಗ…!!!
1 min readಧಾರವಾಡ: ಸಾರ್ವಜನಿಕ ಜೀವನದಲ್ಲಿ ಪೊಲೀಸರು ಭರವಸೆ ಮೂಡಿಸುವ ಕಾಯಕವನ್ನ ಕರ್ತವ್ಯದ ಮೂಲಕ ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಅದ್ಯಾಗ್ಯೂ, ಹೊಸತನದ ಪ್ರಯೋಗಗಳು ನಡೆಯಬೇಕೆಂದು ಧಾರವಾಡ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಅರಿತುಕೊಂಡು ಮುಂದಿಡಿಯಿಟ್ಟಿದ್ದಾರೆ.
ಹೌದು…. ಧಾರವಾಡದ ಎಸಿಪಿ ಬಿ.ಎಸ್.ಬಸವರಾಜ ಅವರು ಮನೆಯ ವಾತಾವರಣ ಸೃಷ್ಟಿ ಮಾಡುವಲ್ಲಿ ಸಫಲರಾಗಿದ್ದಾರೆ. ತಮ್ಮ ಕಚೇರಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ ಪೋಟೊಗಳನ್ನ ಹಾಕಿದ್ದಾರೆ. ಈ ಮೂಲಕ ಭರವಸೆ ಮೂಡಿಸುವ ಕಾರ್ಯ ಆರಂಭವಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ಅಹಿತಕರ ಘಟನೆಗಳಿಂದ ಜನರು ಆರಕ್ಷಕರ ಕುರಿತು ಬೇರೆ ಭಾವನೆ ಮೂಡದಂತೆ ತಡೆಗಟ್ಟಲು ಹೊಸದೊಂದು ವಿಧಾನವನ್ನ ಎಸಿಪಿಯವರು ಬಳಕೆ ಮಾಡಿದ್ದಾರೆ.
ಇಲ್ಲಿ ಕಾಣುವ ಪೋಟೊಗಳು ಮೊದಲು ಪೊಲೀಸರ ಮನೆಯಲ್ಲಿ ಮಾತ್ರ ನೋಡಲು ಸಿಗುತ್ತಿತ್ತು. ಈಗ ಅದನ್ನ ಬದಲಾವಣೆ ಮಾಡಿದ್ದಾರೆ. ಸಾರ್ವಜನಿಕರು ತಮ್ಮ ಕಚೇರಿಗೆ, ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲು ಬಂದಾಗ, ಈ ಭಾವಚಿತ್ರಗಳು ನೊಂದವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದರೇ, ಸಾಕು ಎನ್ನುವುದು ಇದರ ಪ್ರಯೋಜನವಾಗಿದೆ.
ಎಸಿಪಿ ಬಿ.ಎಸ್.ಬಿ ಅವರ ಈ ಕಾರ್ಯ ಜನ ಮೆಚ್ವುಗೆಗೆ ಕಾರಣವಾಗಿದೆ.