ಹು-ಧಾ “CCRB”: ಎಸಿಪಿ ಹುಲ್ಲಣ್ಣನವರ ಔಟ್, ಬಿರಾದಾರ ಇನ್…

ಬೆಂಗಳೂರು: ರಾಜ್ಯ ಸರಕಾರ ಡಿವೈಎಸ್ಪಿ ಕೇಡರ್‌ನ ಹನ್ನರಡು ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಎಸಿಬಿಯಲ್ಲಿದ್ದ ಬಹುತೇಕರನ್ನ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟಿನ ಸಿಸಿಆರ್‌ಬಿಯಲ್ಲಿದ್ದ ಎಸಿಪಿ ಬಾಬಾಸಾಹೇಬ ಹುಲ್ಲಣ್ಣನವರ ಅವರನ್ನ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದ್ದು, ಅಲ್ಲಿದ್ದ ವಿಜಯ ಬಿರಾದಾರ ಅವರನ್ನ ಹುಲ್ಲಣ್ಣನವರ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ದಕ್ಷ ಅಧಿಕಾರಿಯಾಗಿರುವ ವಿಜಯ ಬಿರಾದಾರ, ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಜೊತೆಗೂಡಿ ಕರ್ತವ್ಯ ನಿರ್ವಹಿಸಿ, ಮತ್ತಷ್ಟು ಉತ್ತಮ ಸೇವೆ ನೀಡಲಿದ್ದಾರೆಂಬ ಭಾವನೆಯನ್ನ ಬಿರಾದಾರ ಅವರನ್ನ ನೋಡಿದವರು ಅಂದುಕೊಂಡಿದ್ದಾರೆ.