ಧಾರವಾಡ ACP ವಿಜಯಕುಮಾರ ತಳವಾರ ಸೇರಿ 45 ‘DYSP’ ಗಳ ವರ್ಗಾವಣೆ…

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ 45 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಧಾರವಾಡದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ವಿಜಯಕುಮಾರ ತಳವಾರ ಅವರನ್ನ ಹುಬ್ಬಳ್ಳಿಯ ದಕ್ಷಿಣ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಹಾವೇರಿಯಲ್ಲಿದ್ದ ಶಿವಾನಂದ ಚೆಲವಾದಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, ಬಾಬಾಸಾಹೇಬ ಹುಲ್ಲಣ್ಣನವರ ಹಾವೇರಿಗೆ ವರ್ಗಾಯಿಸಲಾಗಿದೆ.