ಬಾಲ ಬಿಚ್ಚಿದ್ರೇ ಹುಷಾರ್: ಎಸಿಪಿ ನಂದಗಾವಿ ಹುಬ್ಬಳ್ಳಿಯಲ್ಲಿ ಖಡಕ್ ಎಚ್ಚರಿಕೆ…
1 min readಹೊಸ ವರ್ಷ ಆಚರಣೆಯ ಇವೆಂಟ್ಸ್ ನಲ್ಲಿ ಬಾಲ ಬಿಚ್ಚಿದ್ರೆ ಹುಷಾರ್: ಎಸಿಪಿ ನಂದಗಾವಿ ವಾರ್ನಿಂಗ್
ಹುಬ್ಬಳ್ಳಿ: ನಗರದಲ್ಲಿ ಹೊಸ ವರ್ಷ ಆಚರಣೆ ಮಾಡಲು ಅವಳಿ ನಗರದ ಬಾರ್ ಆಂಡ್ ರೆಸ್ಟೋರೆಂಟ್,ರೆಸಾರ್ಟ್ ಗಳಲ್ಲಿ ಎಲ್ಲ ರೀತಿಯಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ,ಆದ್ರೆ ಎಲ್ಲವೂ ಕೂಡಾ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಹೇಗೆ ನಡೆಯಬೇಕೋ ಅದೇ ರೀತಿಯಲ್ಲಿ ನಡಿಬೇಕು ಅಂತಾ ಉತ್ತರ ಉಪ ವಿಭಾಗದ ಎಸಿಪಿ ಬಿ. ನಂದಗಾವಿ ಬಾರ್ ಹಾಗೂ ರೆಸಾರ್ಟ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಗೋಕುಲ್ ಪೊಲೀಸ್ ಠಾಣೆಯಲ್ಲಿ ಬಾರ್ ಹಾಗೂ ರೆಸಾರ್ಟ್ ಮಾಲೀಕರ ಸಭೆಯನ್ನು ಕರೆದು ಮಾತನಾಡಿದ ಅವರು ಹೊಸ ವರ್ಷದ ಹೆಸರಿನಲ್ಲಿ ನಡೆಯುವ ಇವೆಂಟ್ಸ್ ಗಳಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಗಳು ನಡೆಯದ ರೀತಿಯಲ್ಲಿ ನೋಡಿಕೊಳ್ಳಿ,ಏನಾದ್ರು ಇವೆಂಟ್ಸ್ ಗಳಲ್ಲಿ ಅನಾಹುತಗಳು ನಡೆದ್ರೆ ಅವುಗಳಿಗೆ ನಿವೇ ನೇರವಾಗಿ ಹೊಣೆಗಾರರು ಆಗ್ತೀರಿ ಎಂದು ಬಾರ್,ರೆಸ್ಟೋರೆಂಟ್ ಹಾಗೂ ರೆಸಾರ್ಟ್ ಮಾಲೀಕರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಮುಖ್ಯವಾಗಿ ರಾತ್ರಿ 10 ಗಂಟೆಯ ನಂತರದಲ್ಲಿ ಡಿಜೆ ಹಚ್ಚಲು ಪರವಾನಿಗೆ ಇಲ್ಲ,ಇವೆಂಟ್ಸ್ ನಡೆಯುವ ಪ್ರತಿಯೊಂದು ಸ್ಥಳದಲ್ಲೂ ಸಿಸಿ ಕ್ಯಾಮರಾಗಳನ್ನು ಹಾಕಬೇಕು,ಇವೆಂಟ್ಸ್ ಹೆಸರಿನಲ್ಲಿ ಗಾಂಜಾ,ಚರಸ್ ನಂತಾ ಮಾದಕ ವಸ್ತುಗಳನ್ನು ಸಾಗಾಟ ಮಾಡುವುದು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,ಅಂತಾ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಅವಳಿ ನಗರದ ಜನತೆ ಹೊಸ ವರ್ಷದ ಸಂಭ್ರಮಾಚರಣೆ ವೇಳೆಯಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಗಳು ಜರುಗದ ನಿಟ್ಟಿನಲ್ಲಿ ಖಾಕಿ ಕಣ್ಗಾವಲು ವಹಿಸಿದ್ದು,ಹೊಸ ವರ್ಷದ ಆಚರಣೆಯ ಹುರೂಪಿನಲ್ಲಿ ಏನಾದ್ರು ಕಾನೂನು ಮುರಿದ್ರೆ ಸುಮ್ಮನೆ ಬಿಡೋ ಮಾತಿಲ್ಲ ಎಂದು ಖಾಕಿ ಖಡಕ್ ವಾರ್ನಿಂಗ್ ನೀಡಿದೆ.