ಹುಬ್ಬಳ್ಳಿಯಲ್ಲಿ “ಎಸಿಪಿಯಾಗಿದ್ದ ಮಲ್ಲನಗೌಡ ಹೊಸಮನಿ” ಹೃದಯಾಘಾತದಿಂದ ಸಾವು…!

ಹುಬ್ಬಳ್ಳಿ: ನಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಎಸಿಪಿ ಹೊಸಮನಿಯವರು ಶಿಕಾರಿಪುರದ ಬಳಿ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಕೆಲವೇ ನಿಮಿಷಗಳ ಹಿಂದೆ ಸಂಭವಿಸಿದೆ.

ಹುಬ್ಬಳ್ಳಿಯ ಸಂಚಾರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹೊಸಮನಿಯವರು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿದ್ದರು. ಪೋಸ್ಟಿಂಗ್ ನೀಡದ ಹಿನ್ನೆಲೆಯಲ್ಲಿ ತಮ್ಮ ಗಾಂಧಿನಗರದ ನಿವಾಸದಲ್ಲಿಯೇ ಉಳಿದುಕೊಂಡಿದ್ದರು.
ತಮ್ಮ ವೈಯಕ್ತಿಕ ಕಾರಣದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಮಲ್ಲನಗೌಡ ಹೊಸಮನಿ ಅವರು ಶಿಕಾರಿಪುರದ ಬಳಿಯಿದ್ದಾಗ ಹೃದಯಾಘಾತ ಆಗಿದೆ. ತಕ್ಷಣವೇ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಪ್ರಯೋಜನವಾಗಿಲ್ಲ. ಇದೀಗ ಹೊಸಮನಿಯವರ ಶವವನ್ನ ನಗರಕ್ಕೆ ತೆಗೆದುಕೊಂಡು ಬರಲಾಗುತ್ತಿದೆ.
ಮೂಲತಃ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಗಾಂಧಿನಗರದಲ್ಲಿನ ನಿವಾಸಕ್ಕೆ ತರಲಾಗುತ್ತಿದೆ. ಎರಡು ಗಂಡು ಮಕ್ಕಳನ್ನ ಹೊಸಮನಿಯವರು ಅಗಲಿದ್ದಾರೆ.