Posts Slider

Karnataka Voice

Latest Kannada News

ಎಸಿಪಿ ಹಲ್ಲೆ ಪ್ರಕರಣ: ತನಿಖೆ ಮಾಡುತ್ತಿರುವ ಡಿಸಿಪಿ ಹೇಳಿದ್ದೇನು..! ಎಕ್ಸಕ್ಲೂಸಿವ್ ಹೇಳಿಕೆ..

1 min read
Spread the love

ಹುಬ್ಬಳ್ಳಿ: ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿದ್ದ ಸೆಂಟ್ರಿಗೆ ಎಸಿಪಿ ಹಲ್ಲೆ ಮಾಡಿರುವ ಪ್ರಕರಣದ ತನಿಖೆಯನ್ನ ಮಾಡುವಂತೆ ಪೊಲೀಸ್ ಕಮೀಷನರ್ ಆದೇಶ ನೀಡಿದ್ದು, ಈ ಆದೇಶದ ಹಿನ್ನೆಲೆಯಲ್ಲಿ ಡಿಸಿಪಿ ಬಸರಗಿ, ಹಲ್ಲೆ ನಡೆದ ಠಾಣೆಯಲ್ಲೇ ವಿಚಾರಣೆಯನ್ನ ನಡೆಸಿದರು.

ಎಸಿಪಿ ಹೊಸಮನಿಯವರು ಸೆಂಟ್ರಿಯಲ್ಲಿದ್ದ ಕಾನ್ಸಟೇಬಲ್ ಜಗಾಪುರ ಎಂಬುವವರನ್ನ ಕರೆದು ಹೊಡೆದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದನ್ನ ಸ್ವತಃ ಡಿಸಿಪಿ ಬಸವರಗಿಯವರು ವೀಕ್ಷಿಸಿ, ಎಸಿಪಿ ಹೊಸಮನಿ, ಇನ್ಸಪೆಕ್ಟರ್ ಮಹಾಂತೇಶ ಹೊತಪೇಟೆ ಹಾಗೂ ಎಎಸ್ಐ ಹಾಗೂ ಪೇದೆಯನ್ನ ವಿಚಾರಣೆ ನಡೆಸಿ, ಮಾಹಿತಿಯನ್ನ ಕಲೆ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಪಿ ಬಸರಗಿ, ಇದು ಇಂಟರನಲ್ ಮ್ಯಾಟರ್. ವಿಚಾರಣೆ ಮಾಡುತ್ತಿದ್ದೇವೆ ಎನ್ನುತ್ತಲೇ ಮುನ್ನಡೆದರು. ಸುಮಾರು ನಾಲ್ಕು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿರುವ ಡಿಸಿಪಿ, ಈ ಬಗ್ಗೆ ಸಮಗ್ರವಾದ ಮಾಹಿತಿಯನ್ನ ಪೊಲೀಸ್ ಕಮೀಷನರಗೆ ನೀಡಲಿದ್ದಾರೆ.

ಸಂಚಾರಿ ವಿಭಾಗದ ಎಸಿಪಿ ಹೊಸಮನಿ, ರಾತ್ರಿ ಒಂದೂವರೆಗೆ ಬಂದು ಸೆಂಟ್ರಿ ಡ್ಯೂಟಿ ಮಾಡುತ್ತಿದ್ದ ಕಾನ್ಸಟೇಬಲ್ ಜಗಾಪುರ ಎಂಬುವವರಿಗೆ ಹೊಡೆದ ವೀಡಿಯೋ ವೈರಲ್ ಆಗಿದೆ.


Spread the love

Leave a Reply

Your email address will not be published. Required fields are marked *

You may have missed