ರಾತ್ರಿ ಒಂದೂವರೆಗೆ “ಆ” ಠಾಣೆಯಲ್ಲಿ ಎಸಿಪಿಯಿಂದ ಎಎಸ್ಐ, ಪೊಲೀಸ್ ಮೇಲೆ ಹಲ್ಲೆ
1 min readಹುಬ್ಬಳ್ಳಿ: ಅವಳಿನಗರದಲ್ಲಿ ಅಕ್ರಮ ಮರಳು ವ್ಯವಹಾರದ ಬಗ್ಗೆ ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಜರ್ಝರಿತಗೊಂಡ ಸಂಚಾರಿ ಎಸಿಪಿಯವರು ಠಾಣೆಯಲ್ಲೇ ಎಎಸ್ಐ ಹಾಗೂ ಪೊಲೀಸರೋರ್ವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಇಲಾಖೆಯ ಮಾನವನ್ನ ಹರಾಜು ಮಾಡಲು ಸ್ವತಃ ಹಿರಿಯ ಅಧಿಕಾರಿಗಳೇ ಮುಂದಾಗಿರುವುದು ಸೋಜಿಗವೆನಿಸುತ್ತಿದೆ.
ತಡರಾತ್ರಿ ಎಸಿಪಿ ಹೊಸಮನಿಯವರು ಓರ್ವ ಎಎಸ್ಐ ಹಾಗೂ ಪೊಲೀಸ್ ಗೆ ಮನಬಂದಂತೆ ಬೈದು, ಹೊಡೆದಿದ್ದಾರೆಂದು ಹೇಳಲಾಗಿದೆ. ನೀವು ನಂಬಿಕೆ ಉಳಿಸಿಕೊಂಡಿಲ್ಲವೆಂದು ಹಿಗ್ಗಾ-ಮುಗ್ಗಾ ಮನಬಂದಂತೆ ಮಾತನಾಡಿರುವುದು ಇದೀಗ ಬಹಿರಂಗಗೊಂಡಿದೆ.
ಈ ವಿಷಯ ಈಗಾಗಲೇ ಪೊಲೀಸ್ ಆಯುಕ್ತರ ಕಚೇರಿ ತಲುಪಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ವಿಚಾರಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಎಸಿಪಿ ದರ್ಜೆಯ ಅಧಿಕಾರಿಯೋರ್ವರು ಹೀಗೆ ಸಿಬ್ಬಂದಿಗಳ ಜೊತೆಗೆ ನಡೆದುಕೊಂಡಿರುವುದು ಸಾಕಷ್ಟು ವಿವಾದವನ್ನ ಸೃಷ್ಠಿ ಮಾಡಿದೆ.
ಹೊಡೆತ ತಿಂದ ಪೇದೆಯೋರ್ವ ದೂರು ನೀಡುವ ಆಲೋಚನೆಯನ್ನ ಮಾಡಿದ್ದಾರೆಂದು ಹೇಳಲಾಗಿದ್ದು, ಅಸಹ್ಯಕರ ಶಬ್ದಗಳಿಂದ ಎಎಸ್ಐ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆಂದು ಹೇಳಲಾಗುತ್ತಿದೆ.