ಅನುಷಾ ಸಿಸ್ಟರ್… ಯೂ ಆರ್ ವೇರಿ ಸ್ವೀಟ್: ಎಸಿಪಿಯ ವರ್ತನೆಗೆ ಫೀದಾ ಆದ ಪೊಲೀಸರು-Exclusive video
ಧಾರವಾಡ: ಇವತ್ತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಹಬ್ಬದ ವಾತಾವರಣವೇ ಮೂಡಿತ್ತು. ರಕ್ಷಾ ಬಂಧನವನ್ನ ಎಲ್ಲರ ನೆನಪಲ್ಲಿ ಉಳಿಯುವಂತೆ ಮಾಡಿದ್ದು ಎಸಿಪಿ ಜೆ.ಅನುಷಾ..
ಹೌದು… ಅವರಿವತ್ತು ಸಹಾಯಕ ಪೊಲೀಸ್ ಆಯುಕ್ತರಾಗಿ ಠಾಣೆಗೆ ಬಂದಿರಲಿಲ್ಲ. ಬದಲಿಗೆ ಹಗಲಿರುಳು ದುಡಿಯುವ ಸಹೋದರರ ಆರೋಗ್ಯ, ಅಂತಸ್ತು ಹೆಚ್ಚಾಗಲಿ ಎಂಬ ಗಟ್ಟಿತನದಿಂದ ರಾಖೀ ಕಟ್ಟಲು ಬಂದಿದ್ದರು.
ಇಂತಹ ಘಟನೆ ಯಾವಾಗಲೂ ಪೊಲೀಸ್ ಠಾಣೆಯಲ್ಲಿ ನಡೆದಿರಲಿಲ್ಲ. ಕೆಲವು ಪೊಲೀಸ್ ಸಿಬ್ಬಂದಿಗೆ ಸಹೋದರಿಯೇ ಇರಲಿಲ್ಲ. ಅಂಥವರೆಲ್ಲರಿಗೂ ಎಸಿಪಿ ಅನುಷಾ ಮೇಡಂ, “ನಾನೇ ನಿಮ್ಮ ಸಹೋದರಿ” ಎನ್ನುವಂತೆ ನಡೆದುಕೊಂಡರು.
ತಮಗಿಂತ ಅಧಿಕಾರದಲ್ಲಿ ಸಣ್ಣವರೆಂಬ ಭಾವನೆ ಮರೆತು ನಡೆದುಕೊಂಡ ಎಸಿಪಿ ಅನುಷಾ ಅವರು, ಪ್ರತಿಯೊಬ್ಬರ ಮನಸ್ಸು ಗೆದ್ದರು. ಕೆಲವರು ಕಣ್ಣೀರಾದರು.
ಸಂಚಾರಿ ಠಾಣೆಯ ಇನ್ಸ್‌ಪೆಕ್ಟರ್ ಮಲ್ಲನಗೌಡ ನಾಯ್ಕರ ಉಪಸ್ಥಿತಿಯಲ್ಲಿ ನಡೆದುಕೊಂಡ ರೀತಿ, ಎಲ್ಲರೂ ಹ್ಯಾಟ್ಸಾಫ್ ಎಸಿಪಿ ಅನುಷಾ ಅಕ್ಕಾ ಅನ್ನುವಂತಿತ್ತು.
ಪ್ರೀತಿಯ ಸಹೋದರತ್ವ ಬಾಂಧವ್ಯ ಹೆಚ್ಚಿಸುವ ರಕ್ಷಾಬಂಧನವನ್ನ ಮರೆಯಲಾರದಂತೆ ಮಾಡಿದ್ದು ಸಂಚಾರಿ ಠಾಣೆ ಸಿಬ್ಬಂದಿಗಳ ಅದೃಷ್ಟವಾಗಿತ್ತು.