ಆ್ಯಸಿಡ್ ಕುಡಿದ ಪ್ರಕರಣ- ನಿರ್ಲಕ್ಷ್ಯ ವಹಿಸಿರೋರ ಅಮಾನತ್ತು ಮಾಡಲು “ಎಬಿವಿಪಿ” ಆಗ್ರಹ…

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್‌ನಲ್ಲಿ ನೀರೆಂದು ಆ್ಯಸಿಡ್ ಕುಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಳೆಯನ್ನೂ ಲೆಕ್ಕಿಸದೇ ಗಂಟೆಗಟ್ಟಲೆ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಿದ ನೂರಾರು ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿ ಇಂದಿನ ಸ್ಥಿತಿಗೆ ಕಾರಣವಾದವರನ್ನ ತಕ್ಷಣ ಅಮಾನತ್ತು ಮಾಡುವಂತೆ ಆಗ್ರಹಿಸಿದರು.
ಶಿಕ್ಷಣ ಪಡೆಯಲು ಬಂದ ವಿದ್ಯಾರ್ಥಿಗೆ ನಾವು ಬೆಂಬಲವಾಗಿದ್ದೇನೆ. ಆತನ ಸ್ಥಿತಿ ಗಂಭೀರವಾಗಿದೆ. ಇದಕ್ಕೆ ಕಾರಣವಾದವರ ಮೇಲೆ ಕ್ರಮ ಜರುಗಿಸಲೇಬೇಕೆಂದು ಒತ್ತಾಯಿಸಿದರು.
ವಿದ್ಯಾನಂದ, ಅರುಣ ಅಮರಗೋಳ, ಮುರಳಿ ಶೆಟ್ಟಿ, ಅಯ್ಯನಗೌಡ, ನಾಗದತ್ತ, ಮೌಲಿತೇಜ, ಸೋಹನ ಮಲ್ಲಾಡದ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.