ಬಡತನದಲ್ಲಿ ಬೆಳೆದ ಕುಸುಮ ಬಾಲೆ: ಬ್ಯಾಹಟ್ಟಿ ಟೂ ಮಂಗಳೂರು, ತಮಿಳುನಾಡು ಸ್ಟೋರಿ..

ಧಾರವಾಡ: ‘ಅವಕ್ಕ್ ಗಂಡ್ ಮಕ್ಳ್ ಇಲ್ಲಾ.ಆ ಹೆಣ್ಣಗಳನ್ನ ಕಟಕೊಂಡ್ ಏನ್ ಮಾಡ್ತಾನ್’ ಎಂದು ವ್ಯಂಗ್ಯವಾಡುತ್ತಿದ್ದ ಬಾಯಿಗಳಿಗೆ ಬೀಗ ಹಾಕುವಂತ ಕೆಲಸವನ್ನ ಆ ಹೆಣ್ಣು ಮಕ್ಕಳೆ ಮಾಡಿ, ತಂದೆ-ತಾಯಿಗಳಿಗೆ ಗೌರವವನ್ನ ತಂದು ಕೊಟ್ಟಿದ್ದಲ್ಲದೇ, ರಾಜ್ಯದಲ್ಲಿಯೇ ಇಂತಹ ಸಾಧನೆ ಮಾಡಿದ ಮೊದಲ ಕುರುಬ ಸಮಾಜದ ಯುವತಿ ಎನ್ನಿಸಿಕೊಂಡಿದ್ದಾಳೆ.. ಅಂದಿನ ಪುಟ್ಟ ಪೋರಿ..

ಹೌದು.. ಬಡತನದಲ್ಲಿ ತಂದೆ-ತಾಯಿಗಳ ಪ್ರೀತಿಯೊಂದಿದ್ದರೇ ಯಾವುದನ್ನೂ ಹಿಮ್ಮೆಟ್ಟಿಸಲು ಸಾಧ್ಯವೇಯಿಲ್ಲ. ಅದಕ್ಕೊಂದು ನಿದರ್ಶನವೆಂಬಂತೆ ಇಲ್ಲೊಂದು ಮಾಹಿತಿಯನ್ನ ನಿಮಗೆ ಕೊಡುತ್ತೇವೆ. ಪೂರ್ಣವಾಗಿ ಓದಿ..
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ರವಿಕುಮಾರ ನಾಗರಹಳ್ಳಿ ಕಟ್ಟಡ ಕಾರ್ಮಿಕ, ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಗಂಗವ್ವ ಬಡಪ್ಪನವರ ಎಂಬುವವರನ್ನ ಮದುವೆಯಾದ ಮೇಲೆ ಬದುಕು ಬದಲಾವಣೆಯಾಗಿತ್ತು. ಮೊದಲಿಗೆ ಎರಡು ಹೆಣ್ಣು ಮಕ್ಕಳು ಜನಿಸಿದಾಗ, ವ್ಯಂಗ್ಯ ಮಾಡುವ ಜನರೇ ಹೆಚ್ಚಾದರು. ಆದರೆ, ದಂಪತಿಗಳಿಬ್ಬರು ಧೃತಿಗೆಡದೇ ಬದುಕು ಕಟ್ಟಿಕೊಳ್ಳಲು ದೂರದ ಮಂಗಳೂರಿನತ್ತ ಪಯಣ ಬೆಳೆಸಿದರು.. ಇವತ್ತು ವ್ಯಂಗ್ಯ ಮಾಡಿದವರೂ ಕೂಡಾ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಾಧನೆಯನ್ನ ಅದೇ ಹೆಣ್ಣು ಮಗಳೊಬ್ಬಳು ಮಾಡಿ ತೋರಿಸಿದ್ದಾಳೆ.

ತನ್ನಂತೆ ತನ್ನಿಬ್ಬರು ಮಕ್ಕಳಾಗಬಾರದೆಂದು ರವಿಕುಮಾರ ನಾಗರಳ್ಳಿ ಮತ್ತು ಪತ್ನಿ ಗಂಗವ್ವ ದುಡಿಯುತ್ತಲೇ ಹೋದರು. ಹೆಣ್ಣು ಮಕ್ಕಳಿಗೆ ಅವರು ಓದುವವರೆಗೂ ಶಿಕ್ಷಣ ಕೊಡಿಸುವ ಪಣ ತೊಟ್ಟರು. ಅದರ ಪರಿಣಾಮವೆ ಇಂದು ರವಿಕುಮಾರ ನಾಗರಳ್ಳಿಯವರ ಸಣ್ಣ ಮಗಳು ಮಹಾದೇವಿ ನಾಗರಳ್ಳಿ ರಾಜ್ಯವೇ ಹೊರಳಿ ನೋಡುವಂತಹ ಸಾಧನೆ ಮಾಡಿದ್ದಾಳೆ.
ತನ್ನೂರು ಬ್ಯಾಹಟ್ಟಿಯಿಂದ 1997ರಲ್ಲಿ ನಾಗರಳ್ಳಿ ದಂಪತಿಗಳು ಮಂಗಳೂರಿಗೆ ಹೊರಟ ನಿಂತಾಗ ಆಕೆಗಿನ್ನೂ 5 ವರ್ಷ. ಇಂದು ಆಕೆ ತಮಿಳುನಾಡಿನ ಮೀನುಗಾರಿಕೆ ವಿಶ್ವವಿದ್ಯಾಲಯಕ್ಕೆ ಸಹಾಯಕ ಉಪನ್ಯಾಸಕಿಯಾಗಿ ಆಯ್ಕೆಯಾಗಿದ್ದಾಳೆ. ಅಷ್ಟೇ ಅಲ್ಲ, ಈ ಸಾಧನೆ ಮಾಡಿದ ಮೊದಲ ಕುರುಬ ಸಮಾಜದ ಯುವತಿಯಾಗಿದ್ದಾಳೆ.
ಮಹಾದೇವಿ ನಾಗರಳ್ಳಿ ಪ್ರಾಥಮಿಕ ಶಾಲೆಯನ್ನ ಇನ್ಪೆಂಟ್ ಮೇರಿ ಸ್ಕೂಲ್, ಪ್ರೌಢಶಾಲೆಯನ್ನ ಜರೋಜಾ ಶಾಲೆಯಲ್ಲೂ, ಕಾಲೇಜು ಶಿಕ್ಷಣವನ್ನ ಮಧುಸೂದನ ಸಂಸ್ಥೆಯಲ್ಲಿ ಪಡೆದಿದ್ದಾಳೆ. ತದನಂತರ ಮಂಗಳೂರಿನ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಬಿಎಫ್ಎಸ್ಸಿ, ಎಂಎಫ್ಎಸ್ಸಿ ಮುಗಿಸಿ ಪಿಎಚ್ ಡಿ ಮಾಡಿದ್ದಾಳೆ. ಕೆಲವು ದಿನಗಳ ಹಿಂದೆ ನಡೆದ ಸಂದರ್ಶನದಲ್ಲಿ ಮಹಾದೇವಿ ನಾಗರಳ್ಳಿ ಸಹಾಯಕ ಉಪನ್ಯಾಸಕಿಯಾಗಿ ಆಯ್ಕೆಯಾಗಿದ್ದಾಳೆ.
ಹೆಣ್ಣು-ಗಂಡು ಭಾವನೆಯನ್ನ ಮರೆತು ಇರುವ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಾರ್ಥಕತೆ ಕಂಡುಕೊಂಡ ರವಿಕುಮಾರ-ಗಂಗವ್ವ ನಾಗರಳ್ಳಿ ದಂಪತಿಗಳು ಅಭಿನಂದನೆಗೆ ಅರ್ಹರು. ಇಡೀ ರಾಜ್ಯ ಹಾಗೂ ಕುರುಬ ಸಮಾಜ ಹೆಮ್ಮೆ ಪಡುವ ಹಾಗೇ ಸಾಧನೆ ಮಾಡಿರುವ ಮಹಾದೇವಿ ನಾಗರಳ್ಳಿಗೆ ನಾವೆಲ್ಲರೂ ಕಂಗ್ರಾಟ್ಸ್ ಹೇಳಲೇಬೇಕು..
ಕಾಮೆಂಟ್ ಬಾಕ್ಸನಲ್ಲಿ ನಿಮ್ಮ ಶುಭಾಶಯ ತಿಳಿಸಬಹುದು..