ಮರಳಿ ಬಾರದೂರಿಗೆ ಹೊರಟ “ಪೊಲೀಸ್”ಗೆ ಧಾರವಾಡದಲ್ಲಿ ಅಂತಿಮ ಗೌರವ…

ಧಾರವಾಡ: ಛಬ್ಬಿಯ ಶ್ರೀ ಗಣೇಶನ ಬಂದೋಬಸ್ತ್‌ಗೆ ತೆರಳಿದ್ದ ಗರಗ ಠಾಣೆಯ ಪೊಲೀಸ್ ಅಪಘಾತದಲ್ಲಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯು ಮೃತರಿಗೆ ಗೌರವ ಸೂಚಿಸಿತು.
ಬಾಗಲಕೋಟೆಯ ಗುಳೇದಗುಡ್ಡದ ಹುಚ್ಚೇಶ ಹಿರೇಗೌಡರ ನಿನ್ನೆ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದರು. ಇಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪೊಲೀಸ್ ಮೈದಾನದಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಅಂತಿಮ ನಮನ ಸಲ್ಲಿಸಲಾಯಿತು.
ವೀಡಿಯೋ…
ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಗೌರವ ಸೂಚಕದ ವೇಳೆ, ಎಲ್ಲರ ಕಣ್ಣಲ್ಲೂ ನೀರಾಡುತ್ತಿತ್ತು.