ದೇವನೂರ ಕ್ರಾಸ್ ಬಳಿ ಅಪಘಾತ: ಯಲಿವಾಳದ ಯುವಕ ಸಾವು
1 min readಧಾರವಾಡ: ಕ್ರೂಸರ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಇಭಿ ನೌಕರನೋರ್ವ ಸಾವಿಗೀಡಾದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರ ಕ್ರಾಸ್ ಬಳಿ ನಡೆದಿದೆ.
ರಸ್ತೆ ಅಪಘಾತದಲ್ಲಿ ಯಲಿವಾಳ ಗ್ರಾಮದ 25 ವಯಸ್ಸಿನ ಮಹಾಂತೇಶ ರಾಯಪ್ಪ ಒಂಬತ್ತರೊಟ್ಟಿ ಎಂಬ ಯುವಕನೇ ಸಾವಿಗೀಡಾಗಿದ್ದು, ತನ್ನದೇ ಗ್ರಾಮದಲ್ಲಿ ಕೆಇಬಿ ಕೆಲಸವನ್ನ ಮಾಡಿಕೊಂಡಿದ್ದ.
ಕುಂದಗೋಳದಿಂದ ಯಲಿವಾಳ ಗ್ರಾಮಕ್ಕೆ ಹೊರಟಿದ್ದ ಸಮಯದಲ್ಲಿ ಕ್ರೂಸರ್ ವಾಹನ ಸಡನ್ನಾಗಿ ಎದುರಿಗೆ ಬಂದಿದ್ದರಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಮೃತ ಮಹಾಂತೇಶನ ಸಾವಿನಿಂದ ಗ್ರಾಮದಲ್ಲಿ ನೀರವಮೌನ ಆವರಿಸಿದೆ.
ಘಟನಾ ಸ್ಥಳಕ್ಕೆ ತೆರಳಿದ್ದ ಕುಂದಗೋಳ ಠಾಣೆ ಪೊಲೀಸರು ಮೃತದೇಹವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕ್ರೂಸರ್ ವಾಹನವನ್ನ ವಶಕ್ಕೆ ಪಡೆಯಲಾಗಿದೆ.