Exclusive-ಯರಿಕೊಪ್ಪ ಬಳಿ ಸಾರಿಗೆ ಬಸ್ ಪಲ್ಟಿ: 30ಕ್ಕೂ ಹೆಚ್ಚು ಜನರಿಗೆ ಗಾಯ- ಈಗಷ್ಟೇ ನಡೆದ ಘಟನೆ
ಧಾರವಾಡ: ಮೂವತ್ತರಿಂದ ನಲ್ವತ್ತು ಜನರೊಂದಿಗೆ ಪ್ರಯಾಣಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಯರಿಕೊಪ್ಪದ ಬಳಿ ಪಲ್ಟಿಯಾಗಿದ್ದು, ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ.
ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಮಹಿಳೆಯರು ಮಕ್ಕಳು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಯರಿಕೊಪ್ಪದ ಕ್ರಾಸ್ ಬಳಿ ನಡೆದಿರುವ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರನ್ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನೀಡಲು ಆರಂಭಿಸಲಾಗಿದೆ.
ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸುವಲ್ಲಿ ನಿರತರಾಗಿದ್ದಾರೆ. ಅನೇಕರ ಬಟ್ಟೆಗಳು ರಕ್ತಸಿಕ್ಕವಾಗಿದ್ದು, ಯಾವ ಮಟ್ಟದ ಗಾಯಾಗಳಾಗಿವೆ ಎಂಬುದು ಇನ್ನೂ ಮಾಹಿತಿ ಬರಬೇಕಿದೆ.