ಯಾದವಾಡ ಬಸ್ಸಿಗೆ ಮುಳಮುತ್ತಲದ ಬೈಕ್ ಡಿಕ್ಕಿ: ಸ್ಥಳದಲ್ಲಿ ‘ಚೆನ್ನಪ್ಪ’ ದುರ್ಮರಣ…!

ಧಾರವಾಡ: ತಾಲೂಕಿನ ಲಕಮಾಪೂರ-ಯಾದವಾಡ ಮಧ್ಯದಲ್ಲಿ ಸಾರಿಗೆ ಸಂಸ್ಥೆಯ ಬಸ್ಸಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ನಡೆದಿದೆ.

ಮುಳಮುತ್ತಲ ಗ್ರಾಮದ ಚೆನ್ನಪ್ಪ ಬಸಪ್ಪ ಬಣವಣ್ಣವರ ಎಂಬ ಯುವಕನೇ ವೇಗವಾಗಿ ಬೈಕ್ ಚಲಾಯಿಸುತ್ತಿದ್ದಾಗ, ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದಿದ್ದಾನೆ. ಸವಾರನನ್ನ ಬದುಕಿಸುವ ಸಂಬಂಧ ಬಸ್ ಚಾಲಕ ಹೊಲದೊಳಗೆ ವಾಹನವನ್ನ ತೆಗೆದುಕೊಂಡು ಹೋಗಿದ್ದಾನೆ.
ಬೈಕ್ ಸವಾರನ ನಿರ್ಲಕ್ಷ್ಯದಿಂದ ದುರ್ಘಟನೆ ನಡೆದಿದ್ದು, ಅತೀವ ರಕ್ತಸ್ರಾವವಾಗಿ ಚೆನ್ನಪ್ಪ ಸಾವಿಗೀಡಾಗಿದ್ದಾನೆ. ಘಟನೆ ನಡೆಯುತ್ತಿದ್ದ ಹಾಗೇ ಪ್ರಯಾಣಿಕರು ಗಾಬರಿಕೊಂಡಿದ್ದರು.
ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಗರಗ ಠಾಣೆಯ ಪೊಲೀಸರು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.