ನವಲಗುಂದ: ಆಸ್ಪತ್ರೆಗೆ ಬಂದಿದ್ದ ‘ಹಾಳಕುಸುಗಲ್’ ಮಹಿಳೆ ಅಪಘಾತದಲ್ಲಿ ದುರ್ಮರಣ….
ನವಲಗುಂದ: ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದು ಮಗನೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮಹಿಳೆ ದುರ್ಮರಣಕ್ಕೀಡಾದ ಘಟನೆ ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆ ಮುಂಭಾಗ ಸಂಭವಿಸಿದೆ.
ಹಾಳಕುಸುಗಲ್ ಗ್ರಾಮದ ರೇಣವ್ವ ಚೆನ್ನಪ್ಪ ಕರಡಿಗುಡ್ಡ ಎಂಬ ಮಹಿಳೆಯೇ ಸಾವಿಗೀಡಾದ ದುರ್ಧೈವಿಯಾಗಿದ್ದು, ಅಪಘಾತ ಪಡಿಸಿದ ವಾಹನವನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಪಘಾತ ನಡೆದ ಹಿನ್ನೆಲೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ನೂರಾರೂ ಜನ ಜಮಾಯಿಸಿದ್ದರು. ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.