ಭೀಕರ ಅಪಘಾತದ ಎಕ್ಸಕ್ಲೂಸಿವ್ ಸಿಸಿಟಿವಿ: ಐವತ್ತು ಅಡಿ ಹಾರಿ ಬಿದ್ದು ಇಬ್ಬರ ದುರ್ಮರಣ
ವಿಜಯಪುರ: ಬೈಕ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿಯಾದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರದ ಹೊರ ಭಾಗದ ಹಲಗಣಿ ರಸ್ತೆಯ ಬಸವಣ್ಣೆಪ್ಪ ಗುಡಿಯ ಬಳಿ ನಡೆದಿದೆ.
ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದ ಇಬ್ಬರು ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಮೃತರ ಹೆಸರು ಹಾಗೂ ಮಾಹಿತಿ ತಿಳಿದುಬಂದಿಲ್ಲ.
ಇನ್ನು ಪಕ್ಕದ ಪೆಟ್ರೋಲ್ ಪಂಪಿನಲ್ಲಿರುವ ಸಿಸಿಟಿವಿಯಲ್ಲಿ ಈ ಭೀಕರ ರಸ್ಯೆ ಆ್ಯಕ್ಸಿಡೆಂಟ್ ದೃಶ್ಯ ಸೆರೆಯಾಗಿದೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಅಪಘಾತದ ಭೀಕರತೆಯಿಂದ ಬೈಕಿನಲ್ಲಿದ್ದ ಇಬ್ಬರು ಐವತ್ತು ಅಡಿಗೂ ಹೆಚ್ಚು ದೂರ ಹೋಗಿ ಬೇರೆ ಬೇರೆ ಕಡೆ ಬಿದ್ದು ಸಾವಿಗೀಡಾಗಿದ್ದಾರೆ. ಮಧ್ಯವಯಸ್ಕ, ಮತ್ತು ಓರ್ವ ವೃದ್ಧ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.