Karnataka Voice

Latest Kannada News

ಖ್ವಾಜಾ ಬಂದೇ ನವಾಜ್ ದರ್ಶನಕ್ಕೆ ಬರುತ್ತಿದ್ದ ವೇಳೆ ಭೀಕರ ಅಪಘಾತ- 5 ಸಾವು, 11ಜನರ ಸ್ಥಿತಿ ಗಂಭೀರ…

Spread the love

ಕಲಬುರಗಿ: ಭೀಕರವಾದ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಮೃತಪಟ್ಟು, ಹನ್ನೊಂದು ಜನರು ಗಂಭೀರ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೊನ್ನ ಕ್ರಾಸ ಹತ್ತಿರ ಶುಕ್ರವಾರ ತಡರಾತ್ರಿ ನಡೆದಿದೆ.

ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ ಹತ್ತಿರ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದು ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ವಾಜೀದ್, ಮೆಹಬೂಬ್, ಪ್ರಿಯಾಂಕಾ, ಮೆಹಬೂಬ್ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದಾರೆ.

ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರು ಬಾಗಲಕೋಟೆ ಜಿಲ್ಲೆಯವರು ಎಂದು ತಿಳಿದುಬಂದಿದೆ. ವಾಹನ ಸಂಖ್ಯೆ ಕೆಎ -೨೨ ಸಿ ೩೫೮೨ ಲಾರಿಗೆ ಕೆಎ ೨೮-ಎ-೭೨೨೪ ಸಂಖ್ಯೆಯ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದ್ದು, ಮೃತಪಟ್ಟಿರುವ ಎಲ್ಲರೂ ಒಂದೇ ಕುಟುಂಬದವರು.

ಬಾಗಲಕೋಟೆಯಿಂದ ಕಲಬುರಗಿ ನಗರದ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಲು ಬರುತ್ತಿದ್ದರು. ಒಂದೇ ಕುಟುಂಬದ ೩೧ ಜನರು ಮ್ಯಾಕ್ಸಿಕ್ಯಾಬ ಮಾಡಿಕೊಂಡು ಕಲಬುರಗಿಯ ಖಾಜಾ ಬಂದೇ ನವಾಜ್ ದರ್ಗಾಗೆ ಬರುತ್ತಿದ್ದರು.


Spread the love

Leave a Reply

Your email address will not be published. Required fields are marked *