ಹಾರೋಬೆಳವಡಿ, ಸಿಂಗನಳ್ಳಿ ಕ್ರಾಸ್ ಬಳಿ ಅಪಘಾತ- 9 ಜನರಿಗೆ ಗಾಯ, ಹಲವರ ಸ್ಥಿತಿ ಗಂಭೀರ..!

ಧಾರವಾಡ: ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿಯಲ್ಲಿ ಕಾರಿನ ಟೈರವೊಂದು ಸ್ಪೋಟಗೊಂಡ ಪರಿಣಾಮ, ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.

ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಕಾರು ವೇಗವಾಗಿ ಬರುತ್ತಿದ್ದ ಸಮಯದಲ್ಲಿ ಟೈರ್ ಸ್ಪೋಟಗೊಂಡಿದೆ. ಇದರಿಂದ ಕಾರಿನಲ್ಲಿದ್ದ ನಿಂಗಮ್ಮ ವಿಟ್ಲನವರ, ದುರ್ಗೇಶ ವಿಟ್ಲನವರ, ಪ್ರವೀಣ ವಿಟ್ಲನವರ, ರುಕ್ಮಿಣಿ ವಿಟ್ಲನವರ ಹಾಗೂ ಒಂದು ವರ್ಷದ ಕೋಮಲಾ ವಿಟ್ಲನವರ ಗಾಯಗೊಂಡಿದ್ದು, ನಾಲ್ವರನ್ನು ಚಿಕಿತ್ಸೆಗಾಗಿ ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನೊಂದು ಘಟನೆಯು ಧಾರವಾಡದ ಸಿಂಗನಳ್ಳಿ ಕ್ರಾಸ್ ಬಳಿ ನಡೆದಿದ್ದು, ಬೆಳಗಾವಿಯಿಂದ ಬರುತ್ತಿದ್ದ ಕಾರಿಗೆ ಮರಳು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿದ್ದು, ಅವರನ್ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಗೊಂಡವರನ್ನ ಬೆಳಗಾವಿಯ ಮೌಸೀನ ಮುಜಾವರ, ಶಾಹೀದ ಮುಜಾವರ, ತಲಾಹ ಮುಜಾವರ, ಜೋಹಾ ಮುಜಾವರ ಹಾಗೂ ನಿಜ್ಜಾಮುದ್ದೀನ ಗಾಯಗೊಂಡಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಹಾರೋಬೆಳವಡಿ ಬಳಿ ನಡೆದ ಘಟನೆಯ ಬಗ್ಗೆ ಗ್ರಾಮೀಣ ಠಾಣೆಯ ಪೊಲೀಸರು, ಸಿಂಗನಳ್ಳಿ ಬಳಿ ನಡೆದ ಘಟನೆಯ ಬಗ್ಗೆ ಗರಗ ಠಾಣೆಯ ಪೊಲೀಸರು ಪರಿಶೀಲನೆಯನ್ನ ನಡೆಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.