ಶಿರಗುಪ್ಪಿ ಬಳಿ ಸಾವಿಗೀಡಾಗಿದ್ದು ಹುಬ್ಬಳ್ಳಿಯವರು.. ಹಂಪಿ ನೋಡಲು ಹೊರಟಾಗ ದುರ್ಘಟನೆ..

ಹುಬ್ಬಳ್ಳಿ: ನಗರದ ಡಾಲರ್ಸ್ ಕಾಲನಿಯ ನಿವಾಸಿಗಳು ಹಂಪಿ ಪ್ರವಾಸಕ್ಕೆ ಹೊರಟ ಸಮಯದಲ್ಲಿಯೇ ಎದುರಿಗೆ ಬಂದ ಐರಾವತ್ ಬಸ್ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿಯೇ ತಾಯಿ-ಮಗ ಸಾವಿಗೀಡಾಗಿದ್ದು, ಕುಟುಂಬದ ಹಲವರು ಗಾಯಗೊಂಡಿದ್ದಾರೆ.

ಗುಜರಾತ್ ಮೂಲದ ಕುಟುಂಬ ಹುಬ್ಬಳ್ಳಿಯ ಡಾಲರ್ಸ್ ಕಾಲನಿಯಲ್ಲಿ ವಾಸ ಮಾಡುತ್ತಿದೆ. ಇದರಲ್ಲಿ ಮಗ 38 ವಯಸ್ಸಿನ ದಾವಲಬಾಯಿ ಪಡಸಾಲ ಹಾಗೂ ತಾಯಿಯಾದ ಶಾರದ ಬೆಹನ್ ಪಡಸಾಲ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಘಟನೆಯಲ್ಲಿ 14 ವಯಸ್ಸಿನ ರಿದಮ ಪಟೋಲಿಯಾ, 60 ರಮೇಶ ಪಡಸಾಲ, 38ರ ನಿತಾಬೆಹನ್ ಕಿಶೋರಬಾಯಿ ಪಟೋಲಿಯಾ, 34 ವಯಸ್ಸಿನ ದಯಾ ಬೆಹನ್ ಪಡಸಾಲ, 15ರ ದೃಷ್ಟಿ ಪಟೋಲಿಯಾ, 7 ವಯಸ್ಸಿನ ದೇಯ ಪಡಸಾಲ ಹಾಗೂ 2 ವಯಸ್ಸಿನ ದಕ್ಷ ಪಡಸಾಲ ಗಾಯಗೊಂಡಿದ್ದಾರೆ.
ಘಟನೆ ನಡೆಯುತ್ತಿದ್ದ ಹಾಗೇ ಸ್ಥಳೀಯರಾದ ಪ್ರಕಾಶ ರೆಡ್ಡಿ ಹಾಗೂ ಪಾಂಡುರಂಗ ಶಾನುಭೋಗರು ಸೇರಿದಂತೆ ಹಲವರು, ಗಾಯಾಳುಗಳನ್ನ ಹೊರಗೆ ತೆಗೆಯಲು ಸಹಾಯ ಮಾಡಿದ್ದಾರೆ.