ರಸ್ತೆ ಅಪಘಾತ ಮಹಿಳಾ ಪಿಎಸೈ ಸೇರಿ ಕುಟುಂಬದ ನಾಲ್ವರ ದುರ್ಮರಣ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಬಳಿಯಲ್ಲಿ ಕಾರು ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳಾ ಪಿಎಸೈ ಸೇರಿದಂತೆ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ.
ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಪಿಎಸೈ ಲಕ್ಷ್ಮೀ ಹನಮಂತರಾವ ನಲವಡೆ (ಲಕ್ಷ್ಮೀ ವಾಸುದೇವ ಪವಾರ) ಸೇರಿದಂತೆ ಕುಟುಂಬದ ಸದಸ್ಯರು ಸಾವಿಗೀಡಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಮಗನ ಮದುವೆ ಮಾಡಿದ್ದ ಪಿಎಸೈ ಅವರ ಜೊತೆಗೆ ಮಗ ಮತ್ತು ಸೊಸೆ ಕೂಡಾ ಘಟನೆಯಲ್ಲಿ ಸಾವಿಗೀಡಾಗಿದ್ದಾರೆಂದು ಮಾಹಿತಿಯಿದ್ದು, ಇನ್ನಷ್ಟು ವಿಷಯ ಹೊರಬರಬೇಕಾಗಿದೆ.
ಮೃತರನ್ನ ಪ್ರಸಾದ ವಾಸುದೇವ ಪವಾರ, ಅಂಕಿತಾ ಪ್ರಸಾದ ಪವಾರ ಹಾಗೂ ದೀಪಾ ಅನಿಲ ಶಹಪೂರಕರ ಎಂದು ಗುರುತಿಸಲಾಗಿದೆ.